Advertisement

ಸಾಗರ: ಭೀಕರ ಅಪಘಾತ; ಸ್ಥಳದಲ್ಲೇ ಕಾರು ಚಾಲಕ ದುರ್ಮರಣ

06:25 PM Aug 01, 2022 | Team Udayavani |

ಸಾಗರ: ಪ್ರವಾಸಿಗರ ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ತಾಳಗುಪ್ಪದ ಆಲಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ಮೃತ ವ್ಯಕ್ತಿ ಚನ್ನಗಿರಿಯ ಶಾಭಾಜ್(23) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ರಿಹಾನ್(14), ತಬಸ್ಸುಮ್(23), ಶಿಫಾ(27), ಖಮರುನ್ನಿಸಾ(45), ಜಬ್ರುನ್(55), ಮಹಮ್ಮದ್ ಉಸ್ಮಾನ್(25) ಸೇರಿ ಎಲ್ಲಾ ಆರು ಮಂದಿಗೂ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಜೋಗ ಜಲಪಾತ ವೀಕ್ಷಿಸಿ ವಾಪಸ್ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next