Advertisement

ಜಮ್ಮು-ಕಾಶ್ಮೀರದಲ್ಲಿ 3 ಜೈಶ್‌ ಉಗ್ರರ ಸಂಹಾರ :  ವರ್ಷದ ಮೊದಲ ವಾರದಲ್ಲೇ 16 ಉಗ್ರರ ಹತ್ಯೆ

08:25 PM Jan 07, 2022 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಜೈಶ್‌-ಎ-ಮೊಹಮ್ಮದ್‌ನ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಈ ಮೂಲಕ ಹೊಸ ವರ್ಷದ ಮೊದಲ ವಾರದಲ್ಲೇ ಒಟ್ಟಾರೆ 16 ಉಗ್ರರನ್ನು ಹೊಡೆದುರುಳಿಸಿದಂತಾಗಿದೆ.

Advertisement

ಬದ್ಗಾಂನ ಝೋಲ್ವಾ ಗ್ರಾಮದಲ್ಲಿ ತಡರಾತ್ರಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಆರಂಭವಾದ ಗುಂಡಿನ ಚಕಮಕಿಯು ಮೂರು ಜೈಶ್‌ ಉಗ್ರರ ಹತ್ಯೆಯೊಂದಿಗೆ ಕೊನೆಗೊಂಡಿದೆ. ಹತ ಉಗ್ರರಿಂದ ಮೂರು ಎಕೆ56 ರೈಫ‌ಲ್‌ಗ‌ಳು, 8 ಮ್ಯಾಗಜಿನ್‌ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next