Advertisement

ತೆರಕಣಾಂಬಿ, ಹನೂರು ಕಾಲೇಜುಗಳ ಮುಂದುವರಿಕೆ

04:02 PM Sep 25, 2020 | Suhan S |

ಚಾಮರಾಜನಗರ: ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳ ಕೊರತೆಯಿಂದ ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡ ಜಿಲ್ಲೆಯ ಹನೂರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಕೋರಿಕೆಯಂತೆ ಅದೇ ಸ್ಥಳಗಳಲ್ಲಿ ಮುಂದುವರಿಸಲಾಗಿದೆ.

Advertisement

ಜಿಲ್ಲೆಯ ಈ ಎರಡೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನುವಿದ್ಯಾರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿತ್ತು. ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳಿಲ್ಲದಿದ್ದರೂ ಗಡಿ ಪ್ರದೇಶದ ಜಿಲ್ಲೆಯ ವಿದ್ಯಾರ್ಥಿಗಳಶೈಕ್ಷಣಿಕಹಿತದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲೇ ಕಾಲೇಜುಗಳನ್ನು ಮುಂದುವರಿಸ ಬೇಕೆಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್‌ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌, ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಮನವಿ ಸಲ್ಲಿಸಿದ್ದರು. ಎರಡೂ ಕಾಲೇಜುಗಳನ್ನು ಅದೇ ಸ್ಥಳದಲ್ಲಿ ಮುಂದುವರಿಸಲು ಸಮ್ಮತಿಸಿದ್ದು, ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜನ್ನು ಮೈಸೂರು ವಿಶ್ವವಿದ್ಯಾಲಯವು ಘಟಕ ಕಾಲೇಜಾಗಿ ಪಡೆದುಕೊಂಡಿದ್ದು ಕಾಲೇಜು ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗಲಿದೆ ಎಂದು ಸುರೇಶ್‌ಕುಮಾರ್‌ ತಿಳಿಸಿದ್ದಾರೆ. ತಮ್ಮ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ರೈತ ಸಂಘಟನೆಗಳು ಈ ಕಾಲೇಜುಗಳನ್ನು ಇಲ್ಲಿಯೇ ಮುಂದು ವರೆಸಬೇಕೆಂದು ಕೋರಿದ್ದರು. ಎರಡೂ ಕಾಲೇಜುಗಳನ್ನು ಅದೇ ಸ್ಥಳಗಳಲ್ಲಿ ಮುಂದುವರಿಸಲು ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ತೆರಕಣಾಂಬಿ ಕಾಲೇಜನ್ನು ಮೈಸೂರು ವಿವಿ ವ್ಯಾಪ್ತಿಗೆ ಒಳಪಡಿಸಿ ಆದೇಶಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ಕಾಲೇಜುಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕೆಂದು ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಥಳಾಂತರ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿತ್ತು. ಆದರೆ, ತೆರಕಣಾಂಬಿ ಪ್ರಥಮ ದರ್ಜೆಕಾಲೇಜಿನ ಸ್ಥಳಾಂತರ ರದ್ದುಗೊಂಡಿರಲಿಲ್ಲ. ಇದನ್ನು ಅಲ್ಲಿಯೇ ಮುಂದು ವರಿಸಬೇಕೆಂದು ವಿದ್ಯಾರ್ಥಿ ಗಳು, ರೈತ ಸಂಘಟನೆಗಳು ಸತತ ಪ್ರತಿಭಟನೆ ನಡೆಸಿದ್ದವು.ವಿದ್ಯಾರ್ಥಿಗಳುಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next