Advertisement

ತೆಂಕನಿಡಿಯೂರು ಕಾಲೇಜು :ಉಪನ್ಯಾಸ

10:36 PM Apr 08, 2019 | Team Udayavani |

ಮಲ್ಪೆ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಎ. 8ರಂದು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Advertisement

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ವರ್ಣಗೌರಿ ಅವರು ಮಾಹಿತಿ ತಂತ್ರಜ್ಞಾನದ ಉಗಮ, ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ, ಅಂತರ್ಜಾಲ, ಇ-ಅಂಚೆ, ಬ್ಲಾಗ್‌, ವಿಕಿಪಿಡಿಯಾ, ಯೂನಿಕೋಡ್‌ ಇವು ಗಳಲ್ಲಿ ಕನ್ನಡ ಬಳಕೆಯ ವಿಧಾನಗಳನ್ನು ವಿವರಿಸಿದರು. ಕೆ.ಪಿ. ರಾವ್‌ ರವರು ಕನ್ನಡ ಕೀ-ಬೋರ್ಡ್‌ ರೂಪಿಸುವಲ್ಲಿ ಶ್ರಮಿಸಿದ ಬಗೆಯನ್ನು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಎಸ್‌. ಹೆಗ್ಡೆ ಅಧ್ಯಕ್ಷತೆ ವಹಿಸಿ ಕಂಪೂÂಟರ್‌ ಶಿಕ್ಷಣವನ್ನು ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಐಕ್ಯೂಎಸಿ ಸಂಚಾಲಕ ಡಾ| ಸುರೇಶ ರೈ ಕೆ., ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌., ಪೊÅ. ರತ್ನಮಾಲ, ಕು. ಮಮತಾ ಉಪಸ್ಥಿತರಿದ್ದರು. ಕನ್ನಡ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ| ಎಚ್‌.ಕೆ. ವೆಂಕಟೇಶ್‌ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next