Advertisement

ತೆಂಡೂಲ್ಕರ್ ಜತೆಯಲ್ಲಿ ಧೋನಿ: ವೈರಲ್ ಆದ ಫೋಟೋಗಳು

06:08 PM Oct 06, 2022 | Team Udayavani |

ಮುಂಬಯಿ : ಹಲವು ಪಂದ್ಯಗಳನ್ನು ಜತೆಯಾಗಿ ಆಡಿದ್ದ ಭಾರತ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರನ್ನು ಗುರುವಾರ (ಅ. 6) ಅಭಿಮಾನಿಗಳು ಒಂದಾಗಿ ಜಾಹೀರಾತೊಂದರ ಶೂಟಿಂಗ್ ನಲ್ಲಿ ನೋಡಿದರು.

Advertisement

41 ರ ಹರೆಯದ ಧೋನಿ ಮತ್ತು 49 ರ ಹರೆಯದ ತೆಂಡೂಲ್ಕರ್ ಇಬ್ಬರೂ ತಮ್ಮ ನಿವೃತ್ತಿಯ ವರ್ಷಗಳ ನಂತರವೂ ಜಾಹೀರಾತು ಉದ್ಯಮದಲ್ಲಿ ಹಾಟ್ ಪ್ರಾಪರ್ಟಿಯಾಗಿದ್ದು, ತೆಂಡೂಲ್ಕರ್ 2013 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಆಟದಿಂದ ನಿವೃತ್ತರಾಗಿದ್ದು, 2020 ರಲ್ಲಿ ನಿವೃತ್ತರಾಗಿರುವ ಧೋನಿ ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಅನ್ನು ಆಡುತ್ತಿದ್ದಾರೆ.

ಇದನ್ನೂ ಓದಿ : ಭಾರತ-ದ.ಆಫ್ರಿಕಾ: ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಋತುರಾಜ್- ಬಿಷ್ಣೋಯ್

ಧೋನಿ ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿದ್ದು, ಅವರನ್ನು ಮತ್ತು ತೆಂಡೂಲ್ಕರ್ ಅವರನ್ನು ಒಟ್ಟಿಗೆ ನೋಡುವ ಕ್ಷಣಗಳಿಲ್ಲ, ಅವರು ಬ್ರ್ಯಾಂಡ್‌ವೊಂದಕ್ಕಾಗಿ ಚಿತ್ರೀಕರಣ ಮಾಡುತ್ತಿರುವ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next