Advertisement

ತೆಂಡುಲ್ಕರ್‌ ಕೂಡ ಚೆಂಡಿನರೂಪ ಕೆಡಿಸಿದ್ದಾರೆ: ಯೂನಿಸ್‌

03:35 AM Jun 30, 2017 | |

ಲಾಹೋರ್‌: ಕ್ರಿಕೆಟ್‌ನಲ್ಲಿ ಚೆಂಡನ್ನು ವಿರೂಪಗೊಳಿಸುವುದು ಮಾಮೂಲು, ಇದಕ್ಕೆ ನಾನಾ ವಿಧಾನವನ್ನು ಬಳಸಲಾಗುತ್ತದೆ, ಸಚಿನ್‌ ತೆಂಡುಲ್ಕರ್‌ ಕೂಡ “ಬಾಲ್‌ ಟ್ಯಾಂಪರಿಂಗ್‌’ ಮಾಡಿದ್ದಾರೆ! ಇಂಥದೊಂದು ಹೇಳಿಕೆ ಮೂಲಕ ಚರ್ಚೆಗೆ ಹಾದಿ ಮಾಡಿಕೊಟ್ಟಿದ್ದಾರೆ, ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಪಾಕಿಸ್ಥಾನಿ ಕ್ರಿಕೆಟಿಗ ಯೂನಿಸ್‌ ಖಾನ್‌.

Advertisement

ಪಾಕಿಸ್ಥಾನದ ವಾರ್ತಾ ವಾಹಿನಿಯೊಂದರ ಜತೆ ತಮ್ಮ ಕ್ರಿಕೆಟ್‌ ಬದುಕಿನ ಸುದೀರ್ಘ‌ ಹಿನ್ನೋಟವನ್ನು ತೆರೆದಿಡುವಾಗ ಯೂನಿಸ್‌ ಖಾನ್‌ ಚೆಂಡನ್ನು ವಿರೂಪಗೊಳಿಸುವ ಕುರಿತೂ ಮಾತಾಡಿದ್ದಾರೆ. “ಚೆಂಡಿನ ರೂಪ ಕೆಡಿಸುವುದು ಕ್ರಿಕೆಟ್‌ನಲ್ಲಿ ಮಾಮೂಲು. ಆಟಗಾರರು ಇದಕ್ಕೆ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯನ್ನರು ಅಂಟು ಅಥವಾ ಸಿಹಿ ಪದಾರ್ಥವನ್ನು ಬಳಸಿ ಚೆಂಡನ್ನು ಹೊಳೆಯುವಂತೆ ಮಾಡುತ್ತಾರೆ. ದಕ್ಷಿಣ ಆಫ್ರಿಕಾದ ಡು ಪ್ಲೆಸಿಸ್‌ ತಮ್ಮ ಉಡುಗೆಯ ಜಿಪ್‌ ಬಳಸುತ್ತಾರೆ. ಅಷ್ಟೇಕೆ, ಒಮ್ಮೆ ಸಚಿನ್‌ ತೆಂಡುಲ್ಕರ್‌ ಕೈ ಉಗುರಿನಿಂದ ಈ ಕೆಲಸ ಮಾಡಿದ್ದಾರೆ. ಆದರೆ ಬಲಿಷ್ಠ ಕ್ರಿಕೆಟ್‌ ಮಂಡಳಿಗಳಿಂದಾಗಿ ಈ ವಿದ್ಯಮಾನಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿಲ್ಲ…’ ಎಂಬುದಾಗಿ ಯೂನಿಸ್‌ ಖಾನ್‌ ಹೇಳಿದ್ದಾರೆ.

“ಆದರೆ ದೊಡ್ಡ ಮಟ್ಟದಲ್ಲಿ ಹಾಗೂ ಉದ್ದೇಶಪೂರ್ವಕವಾಗಿ ಚೆಂಡಿನ ರೂಪ ಕೆಡಿಸಲು ಪ್ರಯತ್ನಿಸಿದ್ದೇ ಆದರೆ ಇದು ಕೂಡಲೇ ನಿಲ್ಲಬೇಕು. ಮುಂದಿನ ಕ್ರಿಕೆಟ್‌ ಜನಾಂಗಕ್ಕೆ, ಈಗಿನ ಮಕ್ಕಳಿಗೆ ಇದು ತಪ್ಪು ಎಂಬುದರ ಸ್ಪಷ್ಟ ಅರಿವಾಗಬೇಕಿದೆ…’ ಎಂದೂ ಯೂನಿಸ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next