Advertisement

ಸುರಂಗ ಮಾರ್ಗಕ್ಕೆ ಟೆಂಡರ್‌ ಸಲ್ಲಿಕೆ

12:30 PM Oct 26, 2018 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗಕ್ಕೆ ಕೊನೆಗೂ ಟೆಂಡರ್‌ ಸಲ್ಲಿಕೆಯಾಗಿದೆ. ವೆಲ್ಲಾರ್‌ ಜಂಕ್ಷನ್‌ನಿಂದ ಶಿವಾಜಿನಗರ ನಡುವಿನ ಸುಮಾರು ಎರಡೂವರೆ ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಶಾಂತಿನಗರದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಕಚೇರಿಯಲ್ಲಿ ಟೆಂಡರ್‌ ಸಲ್ಲಿಕೆಯಾಗಿದೆ.

Advertisement

ಮೂಲಗಳ ಪ್ರಕಾರ ಒಂದು ಹೊಸದು ಸೇರಿದಂತೆ ನಾಲ್ಕು ಕಂಪೆನಿಗಳು ಭಾಗವಹಿಸಿವೆ ಎನ್ನಲಾಗಿದೆ. ಎರಡನೇ ಹಂತದ ಮೊದಲ ಸುರಂಗ ಮಾರ್ಗದ ಮೊದಲ ಟೆಂಡರ್‌ ಸಲ್ಲಿಕೆ ಇದಾಗಿದೆ. ಇನ್ನು ಉಳಿದ ಸುರಂಗ ಮಾರ್ಗ (ಶಿವಾಜಿನಗರ-ಪಾಟರಿಟೌನ್‌ ನಡುವಿನ)ಕ್ಕೆ ಟೆಂಡರ್‌ ಸಲ್ಲಿಕೆ ನ.2ರಂದು ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next