Advertisement
ಸಮುದ್ರ ಮಧ್ಯೆ ಅವಘಡಗಳು ಸಂಭವಿಸಿದಾಗ ತುರ್ತು ರಕ್ಷಣ ಕಾರ್ಯಕ್ಕಾಗಿ ಇಂಥದ್ದೊಂದು ಆ್ಯಂಬು ಲೆನ್ಸ್‌ಗೆ ಮೀನುಗಾರರು ಹಲವು ವರ್ಷ ದಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದು, ಅಧಿವೇಶನದಲ್ಲೂ ಪ್ರಸ್ತಾವವಾಗಿತ್ತು. ಸೀ ಆ್ಯಂಬುಲೆನ್ಸ್ ಅನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಉ. ಕನ್ನಡ ಜಿಲ್ಲೆಯ ತದಡಿ ಬಂದರಿನಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗುತ್ತದೆ. 3 ಆ್ಯಂಬುಲೆನ್ಸ್‌ಗಾಗಿ 7 ಕೋ. ರೂ ವ್ಯಯಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಸದಾ ಅಪಾಯದಲ್ಲಿಯೇ ಸಮುದ್ರದಲ್ಲಿ ಕಾರ್ಯ ನಿರ್ವಹಿಸುವ ಮೀನುಗಾರರು ಅವಘಡಕ್ಕೆ ಸಿಲುಕಿದಾಗ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಉದಾಹರಣೆಗಳೂ ಇವೆ. ಏನೆಲ್ಲ ವೈದಕೀಯ ಪರಿಕರಗಳು?
ಸಮುದ್ರದಲ್ಲಿ ಮೀನುಗಾರರಿಗೆ ಅಥವಾ ಸಾರ್ವಜನಿಕರಿಗೆ ಯಾವುದಾ ದರೂ ಸಮಸ್ಯೆಯಾದಾಗ ತತ್‌ಕ್ಷಣ ನೆರವಿಗೆ ಧಾವಿಸಿ ಅವರಿಗೆ ವೈದ್ಯ ಕೀಯ ಸೇವೆ ನೀಡಲಾಗುತ್ತದೆ. ಒಂದು ಆ್ಯಂಬುಲೆನ್ಸ್‌ನಲ್ಲಿ ಐವರು ರೋಗಿ ಗಳನ್ನು ಕರದೊಯ್ಯಲುಅವಕಾಶವಿದ್ದು, ಬೋಟಿನಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಯನ್ನೂ ಅಳವಡಿಸಲಾಗುತ್ತದೆ. ಇಸಿಜಿ, ಬ್ಯಾಗ್ ಮತ್ತು ಮಾಸ್ಕ್ ವೆಂಟಿಲೇಶನ್ ಡಿವೈಸ್, ಪಲ್ಸ್ ಆಕ್ಸಿಮೀಟರ್, ಸ್ಟ್ರಚ್ಚರ್, ಶವಾಗಾರಕ್ಕಾಗಿ ಶೀತಲೀಕರಣ ಘಟಕ, ಅದರ ಜತೆಗೆ ರಕ್ಷಣ ಸಿಬಂದಿ, ಆಕ್ಸಿಜನ್ ಸಿಲಿಂಡರ್ ಸಹಿತ ವೈದ್ಯಕೀಯ ಚಿಕಿತ್ಸಾ ಪರಿಕರಗಳು ಒಳಗೊಂಡಿದೆ.
Related Articles
-ಜಯ ಸಿ. ಕೋಟ್ಯಾನ್ ಅಧ್ಯಕ್ಷರು, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ
Advertisement
‘ಸೀ ಆ್ಯಂಬುಲೆನ್ಸ್‌ಗಳನ್ನು ಪ್ರಮುಖವಾಗಿ ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಇಲಾಖೆಯ ಯೋಜನೆಯಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇವೆ ಆರಂಭವಾಗಲಿದೆ. ಟೆಂಡರ್ ಪ್ರಕಿಯೆಗೆ ಚಾಲನೆ ದೊರೆತಿದ್ದು, ಕೆಲವೇ ತಿಂಗಳಲ್ಲಿ ನೂತನ ಆ್ಯಂಬುಲೆನ್ಸ್ ಕಡಲಿಗಿಳಿಯಲಿವೆ.’– ವಿವೇಕ್ ಆರ್. ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ