Advertisement

ದೇಗುಲಗಳ ಆದಾಯದ ನಯಾ ಪೈಸೆ ಚರ್ಚ್‌, ಮಸೀದಿಗಿಲ್ಲ

02:13 PM Oct 20, 2017 | Team Udayavani |

ಚನ್ನಮ್ಮ ಕಿತ್ತೂರು: “ಹಿಂದೂ ದೇವಾಲಯಗಳಿಂದ ಬಂದ ಆದಾಯದ ಹಣವನ್ನು ಮುಜರಾಯಿ ಇಲಾಖೆಯಿಂದ ಮಸೀದಿ ಮತ್ತು ಚರ್ಚ್‌ಗಳಿಗೆ ನಯಾ ಪೈಸೆ ನೀಡಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು.

Advertisement

ಇಲಾಖೆಗೆ ವರ್ಷಕ್ಕೆ 55 ಕೋಟಿ ರೂ. ಅನುದಾನ ಬರುತ್ತದೆ. ದೇವರನ್ನು ಪೂಜಿಸುವುದು ಸರಕಾರದ ಕೆಲಸವಲ್ಲ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳನ್ನು ಮರಳಿ ಸಮಿತಿಯವರಿಗೆ ಹಸ್ತಾಂತರಿಸಿದ್ದೇವೆ. 50 ಲಕ್ಷದಿಂದ 1 ಕೋಟಿವರೆಗೆ ಆದಾಯವಿರುವ 170 ದೇವಸ್ಥಾನಗಳು ಎ ವರ್ಗದಲ್ಲಿ ಬರುತ್ತವೆ. 2ಲಕ್ಷದಿಂದ 50 ಲಕ್ಷದವರೆಗೆ ಬಿ ವರ್ಗದಲ್ಲಿ, ಸಿ ವರ್ಗದಲ್ಲಿ ಬರುವ ದೇವಸ್ಥಾನಗಳ ಆದಾಯ ಕಡಿಮೆ ಇದೆ. ಈಗಾಗಲೇ 140 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ ಎಂದರು.

ನಾವೆಲ್ಲ  ಮೊದಲು ಹಿಂದೂಗಳು. ನಮ್ಮ ನಮ್ಮಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಕಿತ್ತಾಟ ಬೇಡ. ಬಸವಣ್ಣನವರು ಹೇಳಿದಂತೆ ಜಾತ್ಯತೀತವಾಗಿ ಬದುಕಬೇಕೆಂಬುದು ನಮ್ಮ ಆಶಯ. ಮುಖ್ಯಮಂತ್ರಿಗಳು ಎಲ್ಲರೂ ಒಗ್ಗಟ್ಟಿನಿಂದ ಬಂದರೆ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next