ಬ್ರಹ್ಮಾವರ: ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಲ್ಲಿನ ದೇವಾಲಯ ಮತ್ತು ವಿದ್ಯಾಲಯಗಳ ಕೊಡುಗೆ ಅತ್ಯಮೂಲ್ಯ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಶ್ರೀಪಾದರು ಹೇಳಿದರು.
ಅವರು ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಜತ ಪ್ರಭಾವಳಿ, ರಜತ ಪೀಠ, ರಜತ ಗರುಡ ಸಮರ್ಪಣೆ, ಶಿವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ರುದ್ರ ದೇವರಿಂದ ಮನಸ್ಸು ನಿಗ್ರ ಹಿಸಿ ಮನಃಶಾಂತಿ ಪಡೆಯಲು ಸಾಧ್ಯ ಎಂದು ಅವರು ಹೇಳಿದರು. ಶಾಸಕ ವಿನಯ್ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು.
ದೇಗುಲದ ತಂತ್ರಿಗಳಾದ ಪಾಡಿಗಾರು ಶ್ರೀನಿವಾಸ ತಂತ್ರಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಉಡುಪಿ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆಯ ಪ್ರಭಾರ ಸಹಾಯಕ ಆಯುಕ್ತ ಎಸ್. ಯೋಗೀಶ್ವರ್, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಡಿ. ಶೆಟ್ಟಿ, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಗೋಪಿ ಕೆ. ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ್, ಕುಕ್ಕೆಹಳ್ಳಿ ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ನರಸಿಂಗ ಶೆಟ್ಟಿ, ಉಜ್ವಲ್ ಡೆವಲಪ್ಪರ್ನ ಆಡಳಿತ ನಿರ್ದೇಶಕ ಪಿ. ಪುರುಷೋತ್ತಮ ಶೆಟ್ಟಿ, ಕ್ಯಾಪ್ಟನ್ ಸತ್ಯನಾಥ ಹೆಗ್ಡೆ ದೊಡ್ಡಬೀಡು ಕುಕ್ಕೆಹಳ್ಳಿ, ಪ್ರಥಮ ದರ್ಜೆ ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ರಮೇಶ್ ಶೆಟ್ಟಿ, ಉದ್ಯಮಿಗಳಾದ ಗಣೇಶ್ ಎಸ್. ಹೆಗ್ಡೆ ಪುಣೂcರು, ಪಿ. ರಾಜೀವ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿವಿಧ ಕೊಡುಗೆಗಳ ಉದ್ಘಾಟನೆ ಜರಗಿತು. ದಾನಿಗಳಾದ ಕುಕ್ಕೆಹಳ್ಳಿ ಬಡಪಾಲು ಗುಣಕರ ಹೆಗ್ಡೆ, ಸಾಧು ಪೂಜಾರಿ ಒಳಮಡಿ, ನಿವೃತ್ತ ಶಿಕ್ಷಕ ರಘುರಾಮ ಹೆಬ್ಟಾರ್, ಸುಲೇಖ ವಿಕ್ರಮ್ ಶೆಟ್ಟಿ, ರಮೇಶ್ ಸುವರ್ಣ, ಸುಧಾಕರ ಹೆಗ್ಡೆ, ಚಿತ್ತರಂಜನ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು.ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ಪ್ರವೀಣ ಕುಮಾರ್ ಹೆಗ್ಡೆ ವಂದಿಸಿದರು.