Advertisement

California: ಕ್ಯಾಲಿಫೋರ್ನಿಯಾದಲ್ಲಿ ದೇಗುಲ ದರೋಡೆ

10:30 PM Oct 31, 2023 | Team Udayavani |

ವಾಷಿಂಗ್ಟನ್‌: ವಿದೇಶಗಳಲ್ಲಿ ದೇಗುಲಗಳ ಮೇಲಿನ ದಾಳಿಯೇ ಹಿಂದೂಗಳನ್ನು ಕಂಗೆಡಿಸಿರುವ ನಡುವೆಯೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ದೇಗುಲ ಒಂದನ್ನು ದುಷ್ಕರ್ಮಿಗಳು ಕೊಳ್ಳೆ ಹೊಡೆದಿರುವುದು ವರದಿಯಾಗಿದೆ.

Advertisement

ಪಾರ್ಕ್‌ವೇನಲ್ಲಿರುವ ಹರಿ ಓಂ ರಾಧಾ ಕೃಷ್ಣ ಮಂದಿರವನ್ನು ಸೋಮವಾರ ದುಷ್ಕರ್ಮಿಗಳು ಕೊಳ್ಳೆ ಹೊಡೆದಿದ್ದು, ದೇಗುಲದಲ್ಲಿದ್ದ ಹುಂಡಿಯನ್ನು ಹೊತ್ತೂಯ್ದಿದ್ದಾರೆ ದೇವಾಲಯದ ಯಾವೆಲ್ಲ ಇನ್ನಿತರೆ ವಸ್ತುಗಳು ಕಳ್ಳತನವಾಗಿವೆ ಎಂಬುದರ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಪ್ರಕರಣ ಸಂಬಂಧಿಸಿದಂತೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಘಟನೆ ಸಂಬಂಧಿಸಿದಂತೆ ಕ್ಯಾಲಿಫೋರ್ನಿಯಾದಲ್ಲಿನ ಹಿಂದೂ ಸಮುದಾಯಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next