Advertisement

ಟಿಎಂಸಿ ಬಹುಸಂಸ್ಕೃತಿ ಮತ್ತು ಬಹುಧರ್ಮೀಯ ರಾಜ್ಯವನ್ನು ಬೆಂಬಲಿಸುವ ಪಕ್ಷ: ಮಮತಾ ಬ್ಯಾನರ್ಜಿ

04:44 PM Dec 14, 2021 | Team Udayavani |

ಪಣಜಿ: ತೃಣಮೂಲ ಕಾಂಗ್ರೇಸ್ ಪಕ್ಷವು ಬಹುಸಂಸ್ಕಂತಿ ಮತ್ತು ಬಹುಧರ್ಮೀಯ ರಾಜ್ಯವನ್ನು ಬೆಂಬಲಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಎಂಸಿ ಎಂದರೆ “ದೇವಸ್ಥಾನ,ಮಸೀದಿ ಮತ್ತು ಚರ್ಚ” ಎಂದರ್ಥ. ನಾವು ಇಲ್ಲಿ ಮತಗಳನ್ನು ವಿಭಜಿಸಲು ಬಂದಿಲ್ಲ. ಮತಗಳನ್ನು ಕ್ರೋಢೀಕರಿಸಲು ಮತ್ತು ಟಿಎಂಸಿ ಮೈತ್ರಿಕೂಟ ಗೆಲ್ಲಲು ಬಂದಿದ್ದೇವೆ. ನಾವು ಹೋರಾಟ ನಡೆಸಿ ಸಾಯುತ್ತೇವೆಯೇ ಹೊರತು ಹೋರಾಟ ನಡೆಸದೆಯೇ ಹಿಂದಿರುಗುವುದಿಲ್ಲ ಎಂದರು.

ಗೋವಾ ದೊಡ್ಡ ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿರುವ ಹಿಂದೂ ಬಹುಮತದ ರಾಜ್ಯವಾಗಿದೆ. ಇದು ಪೋರ್ಚುಗೀಸ್ ಕಾಲದ ಪರಂಪರೆಯನ್ನು ಹೊಂದಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂಮರು ಕೂಡಾ ಇದ್ದಾರೆ. ರಾಜ್ಯದಲ್ಲಿ ಸುಧೀರ್ಘ ಕಾಲದಿಂದ ಕಾಂಗ್ರೇಸ್ ಅಧಿಕಾರದಲ್ಲಿದ್ದರೂ ಕೂಡ ಕಳೆದ ಸುಮಾರು ಒಂದು ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿದೆ ಎಂದು ಮಮತಾ ಬ್ಯಾನರ್ಜಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next