ರಾಯಬಾಗ: ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದ ಧ್ರುವ ಆನೆ ತುಳಿದು ಮಾವುತನ ಸಹಾಯಕ ಸಾವನ್ನಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಸೋಮವಾರ(ಡಿ.23) ಬೆಳಿಗ್ಗೆ ಸಂಭವಿಸಿದೆ.
ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತ ದುರ್ದೈವಿ.
ಭಾನುವಾರ ರಾತ್ರಿ ಆನೆಗೆ ಮದ ಏರಿತ್ತು ಆದರೆ ಹತೋಟಿಗೆ ಬಂದಿತ್ತು, ಆದರೆ ಇಂದು ಬೆಳಿಗ್ಗೆ ಆನೆಗೆ ಮೇವು ಹಾಕಲು ಹೋದ ಮಾವುತನ ಸಹಾಯಕನ ಮೇಲೆ ದಾಳಿ ನಡೆಸಿದೆ, ಗಂಭೀರ ಗಾಯಗೊಂಡಿದ್ದ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದ. ವಿಚಾರ ತಿಳಿಯುತ್ತಿದ್ದಂತೆ ಭೇವನೂರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಧರೆಪ್ಪ ಭೇವನೂರಗೆ ಕಳೆದ 10 ದಿನ ಹಿಂದೆಯಷ್ಟೇ ಗಂಡು ಮಗು ಜನಿಸಿತ್ತು. ಭೇವನೂರ ಕಳೆದುಕೊಂಡ ಕುಟುಂಬ ಕಂಗಲಾಗಿದೆ.
ಹಾರುಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಾರೂಗೇರಿ ಪೋಲಿಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ