Advertisement

ದೇವಾಲಯ ಧ್ವಂಸ: ವಿವಾದದಲ್ಲಿ ಕೆಸಿಆರ್‌

11:27 AM Jul 12, 2020 | sudhir |

ಹೈದರಾಬಾದ್‌: ತೆಲಂಗಾಣ ಸಚಿವಾಲಯಗಳ ಸಂಕೀರ್ಣ­ದಲ್ಲಿದ್ದ ನಲ್ಲಾ ಪೋಚಮ್ಮ ದೇವಸ್ಥಾನ ಮತ್ತು ಎರಡು ಮಸೀದಿಗಳನ್ನು ನೆಲಸಮ­ಗೊಳಿಸಿದ ತೆಲಂಗಾಣ ಸರಕಾರದ ಕ್ರಮ, ರಾಜಕೀಯ ನಾಯ­ಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್‌ಗಳೆರಡೂ ಸರಕಾರದ ಈ ಕ್ರಮವನ್ನು ಟೀಕಿಸಿದ್ದು, ರಾಜ್ಯದ ಇತಿಹಾಸದಲ್ಲಿ ಇದೊಂದು ಕಪ್ಪು ದಿನ ಎಂದು ಹೇಳಿವೆ.

Advertisement

“”ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರಿಗೆ ತಮ್ಮ ಮಗನನ್ನು ಮುಂದಿನ ಸಿಎಂ ಮಾಡು­ವುದು ಮುಖ್ಯ. ಹೀಗಾಗಿ, ಮೂಢನಂಬಿಕೆಗಳಿಗೆ ಮೊರೆ ಹೋಗುತ್ತಾರೆ. ಇತರ ಎಲ್ಲಾ ಸಮುದಾಯಗಳ ಧಾರ್ಮಿಕ ಭಾವನೆಗಳಿಗಿಂತ ತಮ್ಮ ಭಾವನೆಗಳು ಮತ್ತು ಮೂಢ­ನಂಬಿಕೆ­ಗಳಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬುದು ಇದ ರಿಂದ ಮತ್ತೂಮ್ಮೆ ಸಾಬೀತಾಗಿದೆ” ಎಂದು ಕಾಂಗ್ರೆಸ್‌ನ ಕಾರ್ಯ­ಕಾರಿ ಅಧ್ಯಕ್ಷ, ಸಂಸದ ಎ.ರೇವಂತ ರೆಡ್ಡಿ ಆರೋಪಿಸಿ­ದ್ದಾರೆ.

ಬಿಜೆಪಿ ವಕ್ತಾರ ಕೆ.ಕೃಷ್ಣ ಸಾಗರ ರಾವ್‌ ಮಾತನಾಡಿ, “”ದೇವಾಲಯ ನೆಲಸಮ ಧರ್ಮ­ನಿಂದನೆ­ಯಾಗಿದೆ. ಹಿಂದೂ­ಗಳನ್ನು ಅವಮಾನಿ­ಸುವ, ಪ್ರಚೋದಿಸುವ ಕಾರ್ಯ ಇದು” ಎಂದು ಆರೋಪಿಸಿದ್ದಾರೆ.

ಜು.7ರಂದು ತೆಲಂಗಾಣ ಸಚಿವಾಲಯದ ಹ‌ಳೆಯ ಕಟ್ಟಡ ವನ್ನು ಕೆಡವಿ ಹಾಕಲಾಗಿದ್ದು, ಈ ವೇಳೆ, ಸಚಿವಾಲಯ ಸಂಕೀರ್ಣದಲ್ಲಿದ್ದ ನಲ್ಲಾ ಪೋಚಮ್ಮ ದೇವಸ್ಥಾನ ಮತ್ತು ಎರಡು ಮಸೀದಿ­ಗಳೂ ನೆಲಸಮವಾಗಿವೆ. ಅಲ್ಲಿ ಹೊಸ ಕಟ್ಟಡ ನಿರ್ಮಿಸುವುದು ಸರಕಾರದ ಉದ್ದೇಶ­ವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next