ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಎರಡನೇಅಲೆ ಹೆಚ್ಚಾಗಿರುವುದರಿಂದ ಜಿಲ್ಲೆಯ ಪ್ರವಾಸಿತಾಣಗಳು ಹಾಗೂ ಪ್ರಸಿದ್ಧ ದೇವಾಲಯಗಳಿಗೆಸಾರ್ವಜನಿಕರ ನಿರ್ಬಂಧ ವಿಧಿ ಸಲಾಗಿದೆ.ಸೋಂಕು ನಿಯಂತ್ರಿಸುವ ಉದ್ದೇಶದಿಂದ ಏ16ರಿಂದ ಮೇ 15ರವರೆಗೆ ಜಿಲ್ಲೆಯ ಎಲ್ಲ ಪ್ರವಾಸಿತಾಣಗಳು ಹಾಗೂ ದೇವಾಲಯಗಳಿಗೆ ಸಾರ್ವಜನಿಕರಪ್ರವೇಶ ನಿರ್ಬಂಧಿ ಸಿ ಜಿಲ್ಲಾಧಿ ಕಾರಿ ಎಸ್.ಅಶ್ವಥಿಆದೇಶ ಹೊರಡಿಸಿದ್ದಾರೆ.
ಕೋವಿಡ್ ಎರಡನೇ ಅಲೆಅಪಾಯವನ್ನು ನಿಯ ಂತಿ Åಸುವ ನಿಟ್ಟಿನಲ್ಲಿ ಸಾರ್ವಜನಿಕರು ದೇವಾಲಯ, ಪ್ರವಾಸಿ ಸ್ಥಳಗಳಲ್ಲಿ ಹೆಚ್ಚು ಜನಸೇರುವುದನ್ನು ತಡೆಯುವ ಸಲುವಾಗಿ ಕೇಂದ್ರಸರ್ಕಾರದ ಪುರಾತತ್ವ ಇಲಾಖೆಯ ಆದೇಶದ ಮೇರೆಗೆಏ.15ರಂತೆ ಭಾರ ತೀಯ ಪುರಾತತ್ವ ಇಲಾಖೆಗೆವ್ಯಾಪ್ತಿಗೊಳಪಡುವ ಸಂ ರ ಕ್ಷಿತ ಪ್ರವಾಸಿ ತಾಣಗಳುಮತ್ತು ವಸ್ತು ಸಂಗ್ರಹಾಲ ಯಗಳಿಗೆ ಮೇ 15ರವರೆಗೆಅಥವಾ ಮುಂದಿನ ಆದೇಶದವರೆಗೆ ಸಾರ್ವಜನಿಕರಪ್ರವೇಶವನ್ನು ನಿರ್ಬಂ ದಿಸಲಾಗಿದೆ.
ಯಾವ ದೇವಾಲಯಗಳಿಗೆ ನಿರ್ಬಂಧ: ಸಾರ್ವಜನಿಕರು ಮಂಡ್ಯ ಜಿಲ್ಲಾ ವ್ಯಾಪ್ತಿಯ ಭಾರತೀಯ ಪುರಾತತ್ವಇಲಾಖೆಗೆ ಒಳಪಡುವ ಮೇಲುಕೋಟೆಯ ಶ್ರೀಚಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣದಶ್ರೀರಂಗನಾಥಸ್ವಾಮಿ ಹಾಗೂ ನಾಗಮಂಗಲದ ಶ್ರೀಸೌಮ್ಯಕೇಶವಸ್ವಾಮಿ, ಶ್ರೀರಂಗಪಟ್ಟಣದ ದರಿಯಾದೌಲತ್ ಬಾಗ್, ಗುಂಬಜ್, ಜುಮ್ಮಾ ಮಸೀದಿ,ಒಬೆಲಿಸ್ಕ್ ಯುದ್ಧ ಸ್ಮಾರಕ, ಟಿಪ್ಪು ಮಡಿದ ಸ್ಥಳ.ಕಂಠೀರವ ನರಸಿಂಹ ಪ್ರತಿಮೆ, ಪಾಂಡವಪುರದತೆಣ್ಣೂರಿನ ನಂಬಿ ನಾರಾಯಣ ದೇವಾಲಯ, ಮಂಡ್ಯತಾಲೂಕಿನ ಬಸರಾಳಿನ ಮಲ್ಲಿಕಾರ್ಜುನ, ಕೆ.ಆರ್.ಪೇಟೆಯ ಹೊಸಹೊಳಲಿನ ಲಕ್ಷ್ಮೀನಾರಾಯಣ,ಗೋವಿಂದನಹಳ್ಳಿ ಪಂಚಲಿಂಗೇಶ್ವರ, ಸಿಂದಘಟ್ಟದಲಕ್ಷ್ಮೀನಾರಾಯಣ, ಮಳವಳ್ಳಿ ತಾಲೂಕಿನ ಮಾರೇಹಳ್ಳಿಲಕ್ಷ್ಮೀ ನರಸಿಂಹ ದೇವಾಲಯ ಸೇರಿದಂತೆ ಸುಮಾರು20 ಪ್ರಸಿದ್ಧ ದೇವಾಲಯಗಳಿಗೆ ಭಕ್ತರು ಹಾಗೂಸಾರ್ವಜನಿಕರ ಪ್ರವೇಶ ನಿಷೇಧಿ ಸಲಾಗಿದೆ.
ಹೆಚ್ಚುತ್ತಿರುವ ಸೋಂಕು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆವೇಗವಾಗಿ ಎರಡನೇ ಅಲೆಯ ಸೋಂಕು ಹರಡುತ್ತಿದೆ.ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೋಂಕುನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.ಸಭೆ, ಸಮಾರಂಭ, ಮದುವೆ, ನಾಮ ಕರಣ, ಅಂತ್ಯ ಕ್ರಿಯೆಗಳಿಗೆ ನಿಗದಿತ ಜನರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ವೇಗ ಪಡೆದುಕೊಂಡ ಎರಡನೇ ಅಲೆ: ಕೊರೊನಾಸೋಂಕಿನ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚುವೇಗ ಪಡೆದುಕೊಂಡಿದೆ. ಪ್ರತಿದಿನ ನೂರಕ್ಕೂ ಹೆಚ್ಚುಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.ಮೊದಲ ಅಲೆಯಲ್ಲಿ ನಿಧಾನವಾಗಿ ಏರುಗತಿ ಕಾಣುತ್ತಿದ್ದ ಸೋಂಕು ಎರಡನೇ ಅಲೆ ಅಬ್ಬರಿಸುತ್ತಿದೆ. ಇದರಿಂದ ಗುಣಮುಖರಾದವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳು ಹೆಚ್ಚುತ್ತಿವೆ.