Advertisement

ತಾಪಮಾನ: ಲಕ್ಷಾಂತರ ಯುವಕರಿಂದ ಪ್ರತಿಭಟನೆ

09:53 AM Sep 23, 2019 | sudhir |

ನ್ಯೂಯಾರ್ಕ್‌: ವಿಶ್ವಸಂಸ್ಥೆಯಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನ ನಡೆಯುವುದಕ್ಕೂ ಮೊದಲು ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 4 ಲಕ್ಷ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ಏಷ್ಯಾ ಮತ್ತು ಪೆಸಿಫಿಕ್‌ ದೇಶಗಳಲ್ಲಿ ಆರಂಭವಾದ ಪ್ರತಿಭಟನೆ ಆಫ್ರಿಕಾ, ಯುರೋಪ್‌, ಲ್ಯಾಟಿನ್‌ ಅಮೆರಿಕದಲ್ಲೂ ನಡೆಯಿತು. ಮುಂದಿನ ವಾರವಿಡೀ ವಿವಿಧ ದೇಶಗಳಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿಭಟನೆ ನಡೆಯಲಿದೆ. ಅಮೆರಿಕದಲ್ಲಿ ಥನ್‌ಬರ್ಗ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ನಂತರ ಅವರು ವಿಶ್ವಸಂಸ್ಥೆಯ ಸಮ್ಮೇಳನದಲ್ಲೂ ಭಾಗವಹಿಸಲಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸುಮಾರು 2.50 ಲಕ್ಷ ಜನರು ಭಾಗವಹಿಸಿದ್ದರು ಎಂದು ಥನ್‌ಬರ್ಗ್‌ ಹೇಳಿಕೊಂಡಿದ್ದಾರೆ. ಮುಂದಿನ ಒಂದು ವಾರದಲ್ಲಿ 163 ದೇಶದಲ್ಲಿ 5800 ಪ್ರತಿಭಟನೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ನಮಗೆ ಸುರಕ್ಷಿತ ಭವಿಷ್ಯ ಬೇಕು. ಭವಿಷ್ಯವೇ ಇಲ್ಲದಿದ್ದರೆ ನಾವು ಶಾಲೆಗೆ ಹೋಗಿ ಅಭ್ಯಾಸ ಮಾಡಬೇಕು ಎಂದು ಥನ್‌ಬರ್ಗ್‌ ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ತಾಪಮಾನ ವೈಪರೀತ್ಯ ಕುರಿತು ಯುವ ಸಮ್ಮೇಳನ ನಡೆಯಲಿದೆ. ಇದರಲ್ಲಿ 60 ಕ್ಕೂ ಹೆಚ್ಚು ದೇಶಗಳ ಗಣ್ಯರೂ ಭಾಗವಹಿಸಲಿದ್ದಾರೆ.

ಭಾರತದ ಯತ್ನಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ
ಹವಾಮಾನ ವೈಪರೀತ್ಯ ತಡೆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗು ತ್ತಿರುವಂಥ ಪ್ರಯತ್ನಗಳಲ್ಲಿ ಭಾರತವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ತನ್ನ ನವೀಕರಿಸಲಾಗುವ ಇಂಧನದ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಅತ್ಯುತ್ತಮ ಸಾಧನೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಅಧ್ಯಕ್ಷ ಆ್ಯಂಟೋನಿಯೋ ಗುಟೆರಸ್‌ ಹೇಳಿದ್ದಾರೆ. ಜತೆಗೆ, ಅಂತಾರಾಷ್ಟ್ರೀಯ ಸೌರ ಮೈತ್ರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸ್ಮರಿಸಿದ ಅವರು, ವಿಶ್ವಸಂಸ್ಥೆಗೆ ಭಾರತವು ನೀಡಿದ 193 ಸೌರ ಫ‌ಲಕಗಳ ಕೊಡುಗೆಯು ಅತ್ಯಂತ ಪ್ರಯೋಜನ ಕಾರಿಯಾಗಿದ್ದು, ಸೌರ ಶಕ್ತಿಯ ವಿಚಾರದಲ್ಲಿ ಭಾರತ ಮಾಡಿರುವ ಅತಿದೊಡ್ಡ ಹೂಡಿಕೆ ಇದಾಗಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next