Advertisement
ಹಿಮ ಕರಡಿಯ ಬಣ್ಣ ಬದಲು2040ರ ವೇಳೆಗೆ ಆಕ್ಟಿìಕ್‌ನಲ್ಲಿ ಮಂಜು ಕಾಣೆಯಾಗುತ್ತದೆ. ಹಿಮಕರಡಿಗಳು ಒಂದೋ ಹಸಿವಿನಿಂದ ಸಾಯುತ್ತವೆ ಅಥವಾ ದೀರ್ಘಕಾಲ ಈಜುತ್ತಾ ಕೊನೆಗೊಂದು ದಿನ ಮುಳುಗಿ ಸಾಯುತ್ತವೆ. ಹೇಗೋ ಭೂಪ್ರದೇಶ ತಲುಪುವ ಬೆರಳೆಣಿಕೆಯ ಕರಡಿಗಳು, ತಮ್ಮ ಶುಭ್ರ ಶ್ವೇತವರ್ಣ ಕಳೆದುಕೊಂಡು ಬೂದು ಬಣ್ಣಕ್ಕೆ ತಿರುಗಬಹುದು. ಯಾವುದೋ ತ್ಯಾಜ್ಯದ ರಾಶಿಯಲ್ಲಿ ಆಹಾರ ಹುಡುಕುತ್ತಾ ದಿನಕಳೆಯಬಹುದು.
ಅಟ್ಲಾಂಟಿಕ್ ಸಾಗರದಲ್ಲಿ ಕಂಡುಬರುವ ದೊಡ್ಡ ಕೊಕ್ಕಿನ ಹಕ್ಕಿಯಿದು. ನೀರಿನ ತಾಪಮಾನ ಹೆಚ್ಚುವ ಕಾರಣ ಪಫಿನ್‌ಗಳು ಆಕ್ಟಿìಕ್‌ನ ಉತ್ತರ ಭಾಗದತ್ತ ಸಂಚರಿಸಬಹುದು. ಸಾಮಾನ್ಯವಾಗಿ ಒಂದು ಋತುವಿನಲ್ಲಿ ಈ ಹಕ್ಕಿಗಳ ಕೊಕ್ಕು ಪ್ರಖರ ಬಣ್ಣಕ್ಕೆ ತಿರುಗುತ್ತದೆ. ಆದರೆ ಹವಾಮಾನ ವೈಪರೀತ್ಯ ದಿಂದಾಗಿ ಈ ಪ್ರಕ್ರಿಯೆಯೇ ಸ್ಥಗಿತಗೊಳ್ಳಬಹುದು. ಕೊಕ್ಕು ಮತ್ತು ರೆಕ್ಕೆಗಳ ಬಣ್ಣ ಪೇಲವವಾಗಬಹುದು. ಕುಗ್ಗಲಿದೆ ಕಡಲ ಸಿಂಹ
ಸೀಲ್ ಜಾತಿಯ ಕಡಲ ಪ್ರಾಣಿ ವಾಲಸ್‌ನ ದೇಹದ ಬಣ್ಣ ಕಡುಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ತಿನ್ನಲು ಆಹಾರವಿಲ್ಲದೇ ಇದರ ಗಾತ್ರ ಕುಗ್ಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಮಂಜುಗಡ್ಡೆಯಿಂದ ಹೊರಬರಲು ಸಹಾಯಮಾಡುವಂಥ ಇದರ ಕೋರೆಹಲ್ಲುಗಳಿಗೆ ಕೆಲಸವೇ ಇಲ್ಲದಂತಾಗುತ್ತದೆ. ಇತರೆ ಪ್ರಾಣಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲಷ್ಟೇ ಈ ಹಲ್ಲುಗಳು ಬಳಕೆಯಾಗಬಹುದು.
Related Articles
ಬದಲಾದ ಹೊಸ ಜಗತ್ತಿನಲ್ಲಿ ಬದುಕುಳಿಯುವ ಸಲುವಾಗಿ ನರಿಗಳ ದೇಹದ ಗಾತ್ರವೇ ಬದಲಾಗಲಿದೆ. ಉಷ್ಣತೆ ಹೆಚ್ಚುತ್ತಾ ಹಸಿರು ಹೊದಿಕೆಯ ನೆಲವೂ ಮರುಭೂಮಿ ಯಂತಾಗುವ ಕಾರಣ, ನರಿಗಳ ಕಿವಿಗಳು ದೊಡ್ಡದಾಗುತ್ತಾ, ಕಾಲುಗಳು ಉದ್ದವಾಗುತ್ತಾ ಸಾಗಲಿದೆ. ಹಸಿವಿನಿಂದಾಗಿ ಹೊಟ್ಟೆಯು ಬೆನ್ನಿಗೆ ಅಂಟಲಿದೆ, ದೇಹವು ಸಣಕಲಾಗಲಿದೆ.
Advertisement
ಲೋಳೆ ಮೀನಿಗೆ ಹೆಚ್ಚು ಶಕ್ತಿತಾಪಮಾನ ಏರಿಕೆಯು ಎಲ್ಲ ಪ್ರಾಣಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದರೆ, ಅಚ್ಚರಿಯೆಂಬಂತೆ ಲೋಳೆ ಮೀನು(ಜೆಲ್ಲಿ ಫಿಶ್) ಮಾತ್ರ ಉಷ್ಣತೆ ಹೆಚ್ಚಿರುವ ನೀರಿನಲ್ಲಿ ಹೆಚ್ಚು ಶಕ್ತಿಶಾಲಿಯಾಗಲಿದೆ. ಅವುಗಳ ಗಾತ್ರವೂ ಹಿಗ್ಗಲಿದ್ದು, ಇನ್ನಷ್ಟು ವಿಷಯುಕ್ತವಾಗಲಿವೆ. ಅಂದರೆ, ಈ ಮೀನುಗಳು ಬಾಟಲ್‌ನೋಸ್ ಡಾಲ್ಫಿನ್‌ಗಳಂಥ ಬೃಹದಾಕಾರದ ಮೀನುಗಳನ್ನೂ ಬೇಟೆಯಾಡುವಷ್ಟು ಶಕ್ತಿ ಗಳಿಸಲಿವೆ.