ಶಿಡ್ಲಘಟ್ಟ: ಮಾಹಿತಿ ಮತ್ತು ತಂತ್ರಜ್ಞಾನ ದಲ್ಲಿ ಪ್ರಗತಿ ಸಾಧಿಸುತ್ತಿರುವ ನವಪೀಳಿಗೆ ಗಳಿಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿಕೊಡುವಂತಾಗ ಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲೂಕಿನ ಹರಳಹಳ್ಳಿಯಲ್ಲಿ ತಾಲೂಕು ಕಸಾಪ ಘಟಕದಿಂದ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಹಬ್ಬ ಮತ್ತು ಕವಿಗೋಷ್ಠಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಹೊಲದಿಂದ ಮನೆಗೆ ತರುವಾಗ ಸುಗ್ಗಿ ಹಬ್ಬವೆಂದು ಸಂಭ್ರಮಿಸುತ್ತಿದ್ದರು. ಆದರೆ ಈಗ ಯಾಂತ್ರೀಕೃತ ಬದುಕಾಗಿದ್ದು, ಸುಗ್ಗಿ ಹಬ್ಬವನ್ನು ಆಚರಿಸುವುದನ್ನು ಬಿಡುತ್ತಿದ್ದಾರೆ. ಈಗಿನ ಮಕ್ಕಳಿಗೆ ರೈತಾಪಿ ಜನರ ಬದುಕನ್ನು, ಪರಿಕರಗಳನ್ನು, ಮಣ್ಣಿನೊಂದಿಗಿನ ಸಂಬಂಧವನ್ನು, ಬಾಂಧವ್ಯವನ್ನು ಪರಿಚಯಿಸಬೇಕಿದೆ ಎಂದರು.
ಅಲಂಕರಿಸಿದ ಎತ್ತುಗಳಿಗೆ ಪೂಜೆ ಸಲ್ಲಿಸಿ ಹಣ್ಣು ತಿನ್ನಿಸಲಾಯಿತು. ಎತ್ತುಗಳ ಮಾಲೀಕ ಎಚ್.ನಾರಾಯಣಸ್ವಾಮಿ ಅವರಿಗೆ ಕಸಾಪ ವತಿಯಿಂದ ಗೌರವ ಸಲ್ಲಿಸಲಾಯಿತು.
ಇದನ್ನೂ ಓದಿ:ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಕವಿಗೋಷ್ಠಿ: ಎಸ್.ವಿ. ನಾಗರಾಜರಾವ್, ವಿ.ಚಂದ್ರಶೇಖರ್, ಎಚ್.ವಿ.ಯುಕ್ತ ಕವನ ವಾಚಿಸಿದರು. ಗ್ರಾಮದ ಹಿರಿಯ ಎಚ್. ಎಲ್.ಲಕ್ಷ್ಮಯ್ಯ ಅವರನ್ನು ಸನ್ಮಾನಿಸ ಲಾಯಿತು. ಶಿಕ್ಷಕ ನಾರಾ0ಯಣಸ್ವಾಮಿ, ಗ್ರಾಪಂ ಸದಸ್ಯ ಮುನಿಯಪ್ಪ, ಪಟಾಲಪ್ಪ, ಕಸಾಪ ಕೋಶಾಧಿಕಾರಿ ಶಂಕರ್, ಶ್ರೀನಿವಾಸ್, ನಾರಾಯಣಸ್ವಾಮಿ, ಭುವನೇಶ್ವರಿ ಕನ್ನಡ ಯುವಕರ ಸಂಘದ ಸದಸ್ಯರು ಹಾಜರಿದ್ದರು.