Advertisement

ಕೇಂದ್ರ ಸರ್ಕಾರದ ಸಾಧನೆ ಜನತೆಗೆ ತಿಳಿಸಿ: ಯಡಿಯೂರಪ್ಪ

11:27 AM Jul 14, 2017 | |

ರಿಪ್ಪನ್‌ಪೇಟೆ: ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಪ್ರತಿ ಮನೆಮನೆಗೆ ತೆರಳಿ ಪ್ರತಿಯೊಬ್ಬರ ಮನೆಮುಟ್ಟುವಂತೆ ತಿಳಿಸುವ ಹೊಣೆಗಾರಿಕೆಯನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಗೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಸಮೀಪದ ಕೋಡೂರು ಶಾಂತಪುರ ಗ್ರಾಮದ ಭಾಗಸಂಖ್ಯೆಯ 131 ಮತ್ತು 2 ಬೂತ್‌ ಮಟ್ಟದ ವಿಸ್ತಾರಕರ ಯೋಜನೆಗೆ ಪ್ರಚಾರ
ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ  ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಕೈಗೊಂಡಿರುವ ಜನಪರ ಕಾರ್ಯಕ್ರಮಗಳ ಕುರಿತು ಸಂಪೂರ್ಣ ವಿವರಣೆಗಳನ್ನು ಕರಪತ್ರಗಳಲ್ಲಿ ಪ್ರಕಟಿಸಲಾಗಿದೆ. ಈ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ಮನಮುಟ್ಟುವಂತೆ ವಿವರಿಸುವ ಮೂಲಕ ಸರ್ಕಾರದ ಸಾಧನೆಗಳನ್ನು ಪ್ರಜ್ವಲಿಸುವಂತೆ ಮಾಡಬೇಕು. ಅಲ್ಲದೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಸಹ ಜನರಿಗೆ ತಿಳಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತ ಕರ್ನಾಟಕವನ್ನಾಗಿ ಮಾಡುವುದೇ ಬಿಜೆಪಿಯ ಗುರಿಯಾಗಿದೆ ಎಂದು ಹೇಳಿದರು. 

ಈಗಾಗಲೇ 18 ವರ್ಷದ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಕಡ್ಡಾಯವಾಗಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಹಾಗೆಯೇ ಯುವ ಜನಾಂಗ ಮೋದಿ ಅವರ ಕಾರ್ಯಕ್ರಮದ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿ ದೇಶವನ್ನು ಕಾಂಗ್ರೆಸ್‌ ಮುಕ್ತವಾಗಿಸುವ ನಿಟ್ಟಿನಲ್ಲಿ ಜವಾಬ್ದಾರಿ ಹೆಚ್ಚಿಸಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿಯರು ರೂಪಿಸಿದ ಕಾರ್ಯಕ್ರಮಗಳನ್ನು ಕಾರ್ಯಕರ್ತರ ಪಡೆ ಮತದಾರರಿಗೆ ಮನವರಿಕೆ
ಮಾಡುವ ಮೂಲಕ ಅಚ್ಚರಿಯ ಫಲಿತಾಂಶ ತಂದಿದ್ದು ಅದೇ ಮಾರ್ಗದಲ್ಲಿ ರಾಜ್ಯದಲ್ಲೂ ಕಾರ್ಯಕರ್ತರು, ಮುಖಂಡರು ಮತದಾರರ
ಮನೆಗಳಿಗೆ ತೆರಳಿ ಸ್ಥಳೀಯ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದನ್ನು ಬೇರೆಬೇರೆ ಹಂತದಲ್ಲಿ ಪರಿಹರಿಸುವ ಕೆಲಸ ಮಾಡಬೇಕು
ಎಂದರು. 

ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ. ಸ್ವಾಮಿರಾವ್‌, ಜಿಪಂ ಸದಸ್ಯ ಸುರೇಶ್‌ ಸ್ವಾಮಿರಾವ್‌, ತಾಲೂಕು ಬಿಜೆಪಿ
ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ, ಜಿಲ್ಲಾ ಬಿಜೆಪಿ ಮುಖಂಡರಾದ ಪವಿತ್ರ ರಾಮಯ್ಯ, ಎನ್‌. ಆರ್‌. ದೇವಾನಂದ್‌, ಬಿ.ಎಸ್‌. ಅರುಣ್‌,
ತಾಪಂ ಸದಸ್ಯೆ ರುಕ್ಮಿಣಿ, ಕಲಸೆ ಚಂದ್ರಪ್ಪ, ಕೃಷ್ಣಮೂರ್ತಿ ಮತ್ತಿತರರು ಇದ್ದರು. 

ಸರ್ಕಾರಿ ಯೋಜನೆ ಸದುಪಯೋಗವಾಗಲಿ: ಬಿಎಸ್‌ವೈ 

Advertisement

ರಿಪ್ಪನ್‌ಪೇಟೆ: ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಬೇಕು. ಹಾಗೆಯೇ ಜನರು ಅದನ್ನು
ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು  ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ
ಹೇಳಿದರು. 

 ಸಮೀಪದ ಕೋಡೂರು ಗ್ರಾಮದಲ್ಲಿ ಬಸ್‌ ತಂಗುದಾಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ
ನೇತೃತ್ವದ ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ.
ರಾಜ್ಯದಲ್ಲಿ ಬಿಜೆಪಿ ಅ ಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸಲಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಡಿ ಫಲಾನುಭವಿಗಳಿಗೆ ಕಳೆದ
ನಾಲ್ಕು ಐದು ತಿಂಗಳಿಂದ ವೇತನ ನೀಡಿಲ್ಲ. ಸರ್ಕಾರ ದಿವಾಳಿಯತ್ತ ಸಾಗಿದೆ. ಪಡಿತರ ವಿತರಣೆ ಸಹ ಸಮರ್ಪಕವಾಗಿ ಬಡವರಿಗೆ
ದೊರಕುತ್ತಿಲ್ಲ ಎಂದರು. ಇದೇ ಸಂದರ್ಭದಲ್ಲಿ ಸಂಸದರಿಗೆ ಚಿಕ್ಕಜೇನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸುವ್ಯವಸ್ಥಿತ ಕ್ರೀಡಾಂಗಣ ನಿರ್ಮಿಸುವಂತೆ ಅನುದಾನ ನೀಡಲು ಎಸ್‌ಡಿಎಂಸಿ ಅಧ್ಯಕ್ಷ ಶ್ರೀಕಾಂತ್‌ ಐತಾಳ್‌ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿದ ಸಂಸದ ಬಿ.ಎಸ್‌. ಯಡಿಯೂರಪ್ಪ 4 ಲಕ್ಷ ರೂ ಹಣವನ್ನು ತಮ್ಮ ಅನುದಾನದಡಿ ನೀಡಿದರು.

ಕೋಡೂರು ಗ್ರಾಪಂ ಅಧ್ಯಕ್ಷ ಜಯಂತ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಬಿ. ಸ್ವಾಮಿರಾವ್‌, ಪ್ರಮುಖರಾದ ಪವಿತ್ರ ರಾಮಯ್ಯ, ಡಿ.ಎಸ್‌. ಅರುಣ್‌, ತಾಲೂಕು ಬಿಜೆಪಿ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ, ಎನ್‌.ಆರ್‌
.ದೇವಾನಂದ, ಜಯಪ್ರಕಾಶ್‌ ಶೆಟ್ಟಿ, ಸತೀಶ್‌ ಭಟ್‌, ಸುಧೀಂದ್ರ, ಡಿ.ಟಿ. ಚಂದ್ರಶೇಖರ್‌, ಗುರುಭಟ್‌, ಎಂ.ಬಿ. ಮಂಜುನಾಥ್‌
ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next