Advertisement

ಹೇಳ್ರಿ ,ಪಯಣದಲ್ಲಿ ನಂಗೆ ಜೊತೆ ಆಗ್ತೀರಾ?

06:00 AM Sep 25, 2018 | |

ಈಗಲೇ ನಿಮ್ಮ ನಿರ್ಧಾರ ಹೇಳಿ ಅಂತ ಒತ್ತಾಯವೇನಿಲ್ಲ. ನಿಮ್ಗೆ ನನ್ನ ಬಗ್ಗೆ ಏನ್‌ ಅನ್ಸುತ್ತೂ ಅದನ್ನ ಹೇಳ್ಳೋಕೆ, ಯೋಚನೆ ಮಾಡೋಕೆ ಎಷ್ಟು ಟೈಮ್‌ ಬೇಕೋ ತಗೊಳ್ಳಿ. ಏಳೇಳು ಜನ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಈ ಜನ್ಮದಲ್ಲಿ ನೀವು ಜೊತೆಯಾದರೆ ಚಂದ.
 
ಏನೇನೋ ಹೇಳ್ಬೇಕು, ಮಾತಾಡ್ಬೇಕು ಅಂತ ತುಂಬಾ ಆಸೆ. ಆದ್ರೆ ಹೇಗ್‌ ಮಾತಾಡೋದು ಅಂತ ಗೊತ್ತಾಗ್ತಿಲ್ಲ. ನೀವ್‌ ನನ್ನ ಬಗ್ಗೆ ತಪ್ಪು ತಿಳ್ಕೊಂಡಿಟ್ರೆ ಅಂತ ಭಯ. ಆದ್ರೂ, ನೇರವಾಗಿ ವಿಷಯಕ್ಕೆ ಬರ್ತೀನಿ..

Advertisement

ನಂಗೊತ್ತಿಲ್ಲ ಯಾಕೆ, ಏನು, ಹೇಗೆ ಅಂತೆಲ್ಲಾ, ನಂಗೆ ನೀವೊಂಥರಾ ಲಕ್ಕಿ ಸ್ಟಾರ್‌ ಇದ್ದಂಗೆ. ನೀವು ಸುಮ್ನೆ ಜೊತೆಗಿದ್ದರೂ ಖುಷಿ.   ನಿಮ್‌ ಎಡಗೈ ಕಿರು ಬೆರಳನ್ನ, ನನ್ನ ಬಲಗೈ ಕಿರುಬೆರಳು ಜೊತೆ ಸೇರಿಸಿ ಇಡೀ ಲೋಕ ಸುತೆºàಕು ಅನ್ನೋ ಆಸೆ ಇತ್ತೀಚೆಗೆ ಶುರುವಾಗಿದೆ. ನಿಮ್‌ ಮಡಿಲಲ್ಲಿ ಮಲಗಿ ಆಕಾಶದಲ್ಲಿರೋ ಚುಕ್ಕಿಗಳನ್ನೆಲ್ಲ ಎಣಿಸಬೇಕು ಅಂತ ಅನ್ಸುತ್ತೆ.

ಏನಿಲ್ಲ, ವಿಷಯ ಇಷ್ಟೇ. ನಾನು ನಿಮ್ನ ತುಂಬಾ ಇಷ್ಟ ಪಡ್ತಿದೀನಿ. ಹಾಗಂತ ಹೇಳ್ಳೋಕೆ ಧೈರ್ಯ ಸಾಲತಿಲ್ಲ. ನೀವ್‌ ಹೂಂ ಅಂದ್ರೆ, ಇಡೀ ಲೋಕಕ್ಕೆ ಕೂಗಿ ಕೂಗಿ ಹೇಳ್ತೀನಿ, ನನ್ನ ಹೃದಯ ರಾಜ್ಯದ ರಾಣಿ ನೀವೇ ಅಂತ.

ಈಗಂತೂ ಯಾರನ್ನ ನೋಡಿದರೂ ನೀವೇ ಕಂಡ ಹಾಗಾಗುತ್ತೆ. ಅದ್ಕೆà ಯಾರೊಂದಿಗೂ ಮಾತಾಡೋಕೇ ಹೋಗ್ತಿಲ್ಲ ನಾನು. ಕೊನೆಗೂ ಧೈರ್ಯ ಮಾಡಿ ಹೇಳ್ತಿದೀನಿ ಕೇಳಿ, ನಾನೀಗ ಒಂಟಿತನ ಬಿಡಬೇಕು ಅಂತ ಮಾಡಿದ್ದೀನಿ. ನನ್ನ ಪಯಣದಲ್ಲಿ ನೀವು ಜೊತೆ ಆಗ್ತೀರಾ? ನಿಮ್ಮನ್ನೇ ಕೇಳದೆ ನಾನು ನಿಮ್ಮನ್ನ, ನಿಮ್ಮ ಪ್ರೀತಿಯನ್ನ ಬಯಸಿದ್ದೀನಿ. ಈಗಲೇ ನಿಮ್ಮ ನಿರ್ಧಾರ ಹೇಳಿ ಅಂತ ಒತ್ತಾಯವೇನಿಲ್ಲ. ನಿಮ್ಗೆ ನನ್ನ ಬಗ್ಗೆ ಏನ್‌ ಅನ್ಸುತ್ತೂ ಅದನ್ನ ಹೇಳ್ಳೋಕೆ, ಯೋಚನೆ ಮಾಡೋಕೆ ಎಷ್ಟು ಟೈಮ್‌ ಬೇಕೋ ತಗೊಳ್ಳಿ. ಏಳೇಳು ಜನ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಈ ಜನ್ಮದಲ್ಲಿ ನೀವು ಜೊತೆಯಾದರೆ ಚಂದ. ಆಗಾಗ ನಿಮ್ಗೆ ಬೈದು, ಮು
ದ್ದಾಡಿ, ಕಾಡಿಸಿ, ಪೀಡಿಸಿ, ಅಳಿಸಿ.. ನಿಮ್ಮ ಮುಖಾನೇ ನೋಡ್ತಾ ಬದುಕು ಕಳೆದುಬಿಡ್ತೀನಿ. 

ಒಂದು ಹನಿ ಕಣ್ಣೀರು ಭೂಮಿ ತಾಕೋಕೆ ಬಿಡಲ್ಲ ಅಂತೆಲ್ಲಾ ಹೇಳ್ಳೋದಿಲ್ಲ, ಯಾಕಂದ್ರೆ ನಾನು ನಿಮ್ಮನ್ನ ಮುದ್ದಿಸೋ ರೀತಿಗೆ ಕಣ್ಣೀರು ಪನ್ನೀರಾಗಿ ಹರಿಯಬಹುದು. ಸುಳ್ಳು ಪೊಳ್ಳು ಮಾತುಗಳಿಂದ ಮೋಡಿ ಮಾಡೋ ಹುಡುಗ ನಾನಲ್ಲ. ಆದರೆ, ಜೊತೆಗೆ ಬಂದರೆ ರಾಣಿ ಥರಾ ನೋಡಿಕೊಳ್ತೀನಿ. ಯೋಚೆ° ಮಾಡಿ..

Advertisement

ಎಷ್ಟು ಟೈಂ ಬೇಕೋ ತೆಗೆದುಕೊಳ್ಳಿ ಅಂತ ಹೇಳಿಬಿಟ್ಟಿದ್ದೇನೆ. ಹಾಗಂತ ತುಂಬಾ ಕಾಯಿಸಬೇಡಿ. ಈ ಕಾಯುವಿಕೆಯಲ್ಲಿ ಏನೋ ಖುಷಿ ಇದೆ ನಿಜ. ಆದರೆ, ಅಷ್ಟೇ ನೋವು, ಚಡಪಡಿಕೆ, ಒಂಟಿತನ, ಹೆದರಿಕೆ, ವಿರಹವೂ ಇದೆ. 

ಈ ಮಾತುಗಳನ್ನು ಹೇಳಿಯೇ ಬಿಡಬೇಕು ಅಂತ ಪ್ರತಿ ಸಾರಿ ಬಂದಾಗಲೂ ಆ ನಿಮ್ಮ ವಾರೆ ನೋಟ, ನನ್ನೆಲ್ಲಾ ಮಾತುಗಳಿಗೆ ಕಡಿವಾಣ ಹಾಕಿಬಿಡುತ್ತೆ. ಏನ್‌ ಹೇಳ್ಬೇಕು ಅಂತ ಗೊತ್ತಾಗದೆ ತಬ್ಬಿಬ್ಟಾಗಿಬಿಡುತ್ತೇನೆ. ಅಲ್ಲೆಲ್ಲೋ ಸುಖವಾಗಿ ಇದ್ದ ನನ್ನನ್ನು ನಿಮ್ಮ ಕಡೆಗೆ ಸೆಳೆದು, ಈಗ ಸುಮ್ಮನೆ ನೋವು ತಿಂತಿರೋ ಹೃದಯಕ್ಕೆ ಬೈದುಕೊಂಡು ವಾಪಸಾಗಿಬಿಡ್ತಿದ್ದೆ. ಉಹೂಂ, ಇಷ್ಟು ಕಾದಿದ್ದು ಸಾಕು. ಈ ಎಲ್ಲ ಚಡಪಡಿಕೆಗೊಂದು ಪೂರ್ಣ ವಿರಾಮ ಹಾಕಲೆಂದೇ ಈ ಪತ್ರ. ಮುಕ್ತಾಯ ಯಾವತ್ತೂ ಸುಖಾಂತ್ಯವೇ ಆಗಿರುತ್ತದೆ ಎಂಬ ನಂಬಿಕೆಯಲ್ಲಿ ನಿಮ್ಮದೇ ನೆನಪಲ್ಲಿ ಏನೇನೋ ಗೀಚಿದ ಹುಂಬ

– ಹರ್ಷ ಮ್ಯಾಗೇರಿ

Advertisement

Udayavani is now on Telegram. Click here to join our channel and stay updated with the latest news.

Next