Advertisement

ಟೆಲಿಫೋನ್‌ ಡೈರೆಕ್ಟರಿ

04:46 AM Jun 15, 2020 | Lakshmi GovindaRaj |

ಎಲ್ಲರೂ ಮರೆತೇ ಹೋಗಿರುವ, ಹಿಂದೊಮ್ಮೆ ಹಲವು ಮನೆಗಳಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ, ಕಚೇರಿಗಳಲ್ಲಿ ಅವಶ್ಯವಾಗಿ ಇರುತ್ತಿದ್ದ ಪುಸ್ತಕ ಟೆಲಿಫೋನ್‌ ಡೈರೆಕ್ಟರಿ. ಮನೆಗಳಲ್ಲಿ ಲ್ಯಾಂಡ್‌ಲೈನ್‌ ಫೋನ್‌ಗಳ ಭರಾಟೆ ಜೋರಾಗಿದ್ದ  ಕಾಲದಲ್ಲಿ, ಯಾರದೇ ಫೋನ್‌ ನಂಬರ್‌ ಅನ್ನು ಹುಡುಕಿ ತೆಗೆಯಲು ಇವು ಬಳಕೆಯಾಗುತ್ತಿದ್ದವು.

Advertisement

ದಪ್ಪ ಗಾತ್ರದ ಈ ಡೈರೆಕ್ಟರಿಯ ಪುಟಗಳು ಹಳದಿ ಬಣ್ಣದಲ್ಲಿರುತ್ತಿದ್ದವು. ಹೀಗಾಗಿ ಅದಕ್ಕೆ “ಯೆಲ್ಲೋ ಪೇಜಸ್‌’ ಎಂದೂ ಕರೆಯುತ್ತಿದ್ದರು.  ಡೈರೆಕ್ಟರಿಯಲ್ಲಿ ಫೋನ್‌ ನಂಬರ್‌, ವಿಳಾಸ ಮತ್ತು ವ್ಯಕ್ತಿಗಳ ಹೆಸರನ್ನು ನೋಡಬಹುದಾಗಿತ್ತು. ಜೊತೆಗೆ, ಅದರಲ್ಲಿ ಆಯಾ ಪ್ರದೇಶಗಳ ಕೋಡ್‌, ಅಂತಾರಾಜ್ಯ, ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವ ವಿಧಾನ, ತುರ್ತು ಕರೆಗಳ ಸಂಖ್ಯೆ  ಮತ್ತಿತರೆ ಉಪಯುಕ್ತ ಮಾಹಿತಿಯೂ ಇರುತ್ತಿತ್ತು.

ಸ್ಮಾರ್ಟ್‌ಫೋನ್‌ ನಲ್ಲಿ ಎಲ್ಲಾ ಫೋನ್‌ ನಂಬರ್‌ಗಳನ್ನು ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಸಂಗ್ರಹಿಸಿ ಡುವ ಸಾಮರ್ಥ್ಯ ಬಂದ ಮೇಲೆ, ಡೈರೆಕ್ಟರಿಗಳ ಅವಶ್ಯಕತೆ ಕಡಿಮೆ ಯಾಗತೊಡ ಗಿತು. ಸ್ಮಾರ್ಟ್‌ ಫೋನುಗಳ ಹಾವಳಿಯಲ್ಲಿ ಲ್ಯಾಂಡ್‌ಲೈನ್‌ ಫೋನು   ಗಳು ಇಲ್ಲವಾದವು. ಅದರ ಬೆನ್ನಿಗೇ ಟೆಲಿಫೋನ್‌ ಡೈರೆಕ್ಟರಿಗಳೂ ಮರೆಯಾದವು.

Advertisement

Udayavani is now on Telegram. Click here to join our channel and stay updated with the latest news.

Next