Advertisement

Telegram Task: 6.91 ಲ.ರೂ. ವಂಚನೆ

11:12 PM Nov 15, 2023 | Team Udayavani |

ಮಂಗಳೂರು: ಟೆಲಿಗ್ರಾಂ ಆ್ಯಪ್‌ ಮೂಲಕ ಟಾಸ್ಕ್ ನೀಡಿ 6.91 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.1ರಂದು ದೂರುದಾರರ ಮೊಬೈಲ್‌ಗೆ ಯುಟ್ಯೂಬ್‌ ಮೂಲಕ ಬಂದ ಜಾಹೀರಾತು ಕ್ಲಿಕ್‌ ಮಾಡಿದಾಗ ಅದರಲ್ಲಿ ಟೆಲಿಗ್ರಾಂ ಖಾತೆಯ ಲಿಂಕ್‌ ಇತ್ತು.

Advertisement

ಅದನ್ನು ತೆರೆದಾಗ ಅದರಲ್ಲಿ ಟಾಸ್ಕ್ಗಳನ್ನು ಪೂರ್ಣಗೊಳಿಸಿ ಹಣ ಗಳಿಸಬಹುದು ಎಂದು ತಿಳಿಸಲಾಗಿತ್ತು. ಅದರಂತೆ ದೂರುದಾರರು 9 ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದರು. ಆದರೆ ದೂರುದಾರರಿಂದಲೇ ಹಂತ ಹಂತವಾಗಿ 6,91,714 ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next