ಮಣಿಪಾಲ:ಟೆಲಿಗ್ರಾಮ್ Appನಲ್ಲಿ ಶಿಪ್ ಇಟ್ ಎಂಬ ರಿವ್ಯೂ ಆಪ್ ನ ಮೆಹೆಕ್ ಮೆಹೆರಾ ಎಂಬ ಗ್ರೂಪ್ ನಲ್ಲಿ 10,000 ಹಣ ಹೂಡಿದಲ್ಲಿ 8,000 ರೂಪಾಯಿ ಲಾಭ ನೀಡುವುದಾಗಿ ನಂಬಿಸಿ ಮಹಮ್ಮದ್ ಶರೀಫ್ ಎಂಬವರಿಗೆ 8 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಏನಿದು ಪ್ರಕರಣ:
ಮೆಹೆಕ್ ಮೆಹೆರಾ ಎಂಬ ಟೆಲಿಗ್ರಾಮ್ ಗ್ರೂಪ್ ನಲ್ಲಿ 10,000 ಹಣ ಹೂಡಿದಲ್ಲಿ 8,000 ಲಾಭ ನೀಡುತ್ತೇವೆ ಎಂಬ ಸಂದೇಶ ಮಹಮ್ಮದ್ ಶರೀಫ್ ಅವರ ಮೊಬೈಲ್ ಗೆ ಬಂದಿತ್ತು. ಅದರಂತೆ ಶರೀಫ್ ಎಸ್ ಬಿಐ ಖಾತೆಯಿಂದ ಯೋನೋ App ಮೂಲಕ ಶಿಪ್ ಇಟ್ ಎಂಬ ರಿವ್ಯೂ ಟ್ರೇಡ್ ಗೆ 10, 000 ರೂ. ಹೂಡಿಕೆ ಮಾಡಿದ್ದರು.
ಅದರಂತೆ ಮೆಹೆಕ್ ಮೆಹೆರಾ Appನವರು 18,000 ರೂಪಾಯಿಯನ್ನು ಮಹಮ್ಮದ್ ಶರೀಫ್ ಅವರ ಯೂನಿಯನ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ನಂತರ ಶರೀಫ್ 2/09/2024ರಂದು 21,418 ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಮೆಹೆಕ್ ಮೆಹೆರಾ Appನವರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ತೆಗೆಯಲು ಆಗುತ್ತದೆ ಎಂದು ನಂಬಿಸಿ ಮೆಸೇಜ್ ಮಾಡಿದ್ದು, ಅದರಂತೆ ಶರೀಫ್ ಹೂಡಿಕೆ ಮಾಡಿದ್ದರು. Appನಲ್ಲಿ ಶರೀಫ್ ಲಾಭಾಂಶ 15,00,000 ಎಂದು ತೋರಿಸುತ್ತಿತ್ತು.
ಆದರೆ ಶರೀಫ್ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ, ಏಳೂವರೆ ಲಕ್ಷ ಹಣ ಪೆನಾಲ್ಟಿ ಕಟ್ಟಿ ಉಳಿದ ಹಣ ಡ್ರಾ ಮಾಡಬೇಕು ಎಂದು ಮೆಸೇಜ್ ಬಂದಿದ್ದು, ಹೆಚ್ಚಿನ ಲಾಭಾಂಶ ನೀಡುವುದಾಗಿ ಮೋಸ ಮಾಡಿ 8,46,583 ರೂಪಾಯಿ ಹಣವನ್ನು App ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿ ಮಣಿಪಾಲ ಪೊಲೀಶ್ ಠಾಣೆಗೆ ಶರೀಫ್ ದೂರು ನೀಡಿದ್ದಾರೆ.