Advertisement

ತೆಲಂಗಾಣದಲ್ಲಿ “ಫಾಕ್ಸ್‌ಕಾನ್‌’ ಘಟಕ; 25,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

10:00 PM May 15, 2023 | Team Udayavani |

ಹೈದರಾಬಾದ್‌: ಆ್ಯಪಲ್‌ ಕಂಪನಿಯ ಉತ್ಪನ್ನಗಳ ತಯಾರಿಕಾ ಸಂಸ್ಥೆ “ಫಾಕ್ಸ್‌ಕಾನ್‌’, ತೆಲಂಗಾಣದಲ್ಲಿ 50 ಕೋಟಿ ಡಾಲರ್‌ ಹೂಡಿಕೆ ಮಾಡಲಿದೆ. ಇದರಿಂದ ಮೊದಲ ಹಂತದಲ್ಲಿ 25,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್‌ ತಿಳಿಸಿದ್ದಾರೆ.

Advertisement

ತೆಲಂಗಾಣ ರಾಜಧಾನಿ ಹೈದರಾಬಾದ್‌ ಸಮೀಪದ ರಂಗಾರೆಡ್ಡಿ ಜಿಲ್ಲೆಯ ಕೊಂಗರ ಕಲಾನ್‌ನಲ್ಲಿ “ಫಾಕ್ಸ್‌ಕಾನ್‌’ ಘಟಕ ನಿರ್ಮಾಣವಾಗಲಿದೆ.

ಈ ವಿಷಯವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಕೂಡ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡು, ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಘಟಕದಲ್ಲಿ ಐಫೋನ್‌ ಸ್ಮಾರ್ಟ್‌ ಮೊಬೈಲ್‌ಗ‌ಳು ತಯಾರಾಗಲಿವೆ. ತೈವಾನ್‌ನ ನ್ಯೂ ತೈಪೆ ನಗರದಲ್ಲಿ ಪ್ರಧಾನ ಕಚೇರಿಯನ್ನು ಈ ಕಂಪನಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next