Advertisement

Telangana; ರಾಜ್ಯದ ‘ವಾಲ್ಮೀಕಿ’ ಹಗರಣ ಸದ್ದು!

01:43 AM Aug 27, 2024 | Team Udayavani |

ಹೈದ್ರಾಬಾದ್‌: ಕರ್ನಾಟಕದ ವಾಲ್ಮೀಕಿ ಹಗರಣವು ಪಕ್ಕದ ತೆಲಂಗಾಣದಲ್ಲಿ ಸದ್ದು ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ತೆಲಂಗಾಣ ಚುನಾವಣೆಗೆ ಕಾಂಗ್ರೆಸ್‌ ಬಳಸಿಕೊಂಡಿದೆ ಎಂದು ಪ್ರತಿಪಕ್ಷ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ ಆರೋಪಿಸಿದ್ದಾರೆ.

Advertisement

ಯುಟ್ಯೂಬ್‌ ಚಾನೆಲ್‌ವೊಂದರಲ್ಲಿ ಮಾತನಾಡಿರುವ ಕೆ.ಟಿ.ರಾಮಾರಾವ್‌, ವಾಲ್ಮೀಕಿ ಹಗರಣದಲ್ಲಿ ತೆಲಂಗಾಣ ಕಾಂಗ್ರೆಸ್‌ ನಾಯಕರ ಪಾತ್ರವಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. 180 ಕೋಟಿ ರೂಪಾಯಿನ್ನು ಸರಕಾರಿ ಬ್ಯಾಂಕ್‌ ಖಾತೆಗಳಿಂದ ಇತರ ಖಾಸಗಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಈ ಪೈಕಿ 45 ಕೋಟಿ ಹೈದ್ರಾಬಾದ್‌ನ ವಿವಿಧ 9 ಖಾತೆಗಳಿಗೆ ಹಾಕಲಾಗಿದೆ. ಈ ಕುರಿತು ರಾಜ್ಯ ಸರಕಾರವು ತನಿಖೆ ನಡೆಸಿ, ಹಣ ಸ್ವೀಕರಿಸಿದ ಖಾತೆಗಳ ಮಾಹಿತಿಯನ್ನು ಯಾಕೆ ಬಹಿರಂಗ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಸರಕಾರವು ಈ ಹಣವನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಳಸಿರುವ ಸಾಧ್ಯತೆ ಇದೆ.ಮುಂದಿನ ನಾಲ್ಕೈದು ದಿನದಲ್ಲಿ ಸಂಪೂರ್ಣ ಮಾಹಿತಿ ಬಹಿರಂಗ ಮಾಡುವುದಾಗಿ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next