Advertisement

ರ‍್ಯಾಗಿಂಗ್‌, ಕಿರುಕುಳ ನೀಡಿದ ಆರೋಪ: ಕೊನೆಯುಸಿರೆಳೆದ ವೈದ್ಯಕೀಯ ವಿದ್ಯಾರ್ಥಿನಿ

11:59 AM Feb 27, 2023 | Team Udayavani |

ಹೈದರಾಬಾದ್: ರ‍್ಯಾಗಿಂಗ್‌ ಮಾಡಿದ್ದಕ್ಕೆ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಬದುಕು ದಾರುಣ ಅಂತ್ಯವಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.

Advertisement

ಡಿ ಪ್ರೀತಿ (26) ಮೃತ ವಿದ್ಯಾರ್ಥಿನಿ.

ಘಟನೆ ಹಿನ್ನೆಲೆ: ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಮೊಹಮ್ಮದ್ ಅಲಿ ಸೈಫ್ ಎನ್ನುವ ಸೀನಿಯರ್‌ ವಿದ್ಯಾರ್ಥಿ ಪ್ರೀತಿ ಅವರಿಗೆ ರ‍್ಯಾಗಿಂಗ್‌ ಹಾಗೂ ಕಿರುಕುಳ ನೀಡಿದ್ದ. ಇದೇ ಕಾರಣದಿಂದ ಮನನೊಂದಿದ್ದ ಪ್ರೀತಿ ಬುಧವಾರ ( ಫೆ. 22 ರಂದು) ನೈಟ್‌ ಶಿಫ್ಟ್‌ ನಲ್ಲಿ ಕೆಲಸ ಮಾಡುವ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪ್ರೀತಿ ಭಾನುವಾರ ರಾತ್ರಿ ( ಫೆ. 26 ರಂದು) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಪ್ರೀತಿಯ  ತಂದೆ ನೀಡಿದ ದೂರಿನ ಮೇರೆಗೆ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ ನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರ‍್ಯಾಗಿಂಗ್‌ ಮಾಡಿದ ಆರೋಪದಡಿಯಲ್ಲಿ ಬಂಧಿಸಲಾಗಿದೆ.

ಈ ಹಿಂದೆ ಮೊಹಮ್ಮದ್ ಅಲಿ ಸೈಫ್ ವಿರುದ್ದ ಕಾಲೇಜು ಹಾಗೂ ಆಸ್ಪತ್ರೆಗೆ ದೂರು ನೀಡಿದ್ದರೂ, ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next