ಹೈದರಾಬಾದ್: ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಬಂಧಿಸಬಾರದು ಎಂದು ತೆಲಂಗಾಣ ಹೈಕೋರ್ಟ್ ಶನಿವಾರ ಆದೇಶ ನೀಡಿದೆ.
Advertisement
ಟಿಆರ್‌ಎಸ್ ಶಾಸಕರ ಖರೀದಿಗೆ ಸಂಬಂಧಿಸಿದಂತೆ 21ರಂದು ವಿಚಾರಣೆಗೆ ಆಗಮಿಸಬೇಕು. ಇಲ್ಲದೇ ಇದ್ದಲ್ಲಿ ಬಂಧಿಸಲಾಗುತ್ತದೆ ಎಂದು ಶುಕ್ರವಾರ ಎಸ್‌ಐಟಿ ಸಮನ್ಸ್ ನೀಡಿತ್ತು. ಅದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಹೈಕೋರ್ಟ್ ಬಿ.ಎಲ್.ಸಂತೋಷ್ ಅವರಿಗೆ ನೋಟಿಸ್‌ನ ಪ್ರತಿ ದೊರಕುವ ಅವರಿಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದು ಬೇಡ.
ದೆಹಲಿ ಪೊಲೀಸ್ ಇಲಾಖೆಯ ನೆರವಿನಿಂದ ಸಂತೋಷ್ ಅವರಿಗೆ ನೋಟಿಸ್ ಸಿಗುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.