Advertisement

ವಿವಿಧ ತಳಿಯ 1634 ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡ ತೆಕ್ಕಟ್ಟೆಯ ಉದ್ಯಮಿ

07:45 PM Jun 12, 2022 | Team Udayavani |

ತೆಕ್ಕಟ್ಟೆ: ಉಪ ಉಷ್ಣ ವಲಯ ಹಾಗೂ ಕರಾವಳಿಯ ಹವಾಮಾನಕ್ಕೆ ಅನುಗುಣವಾಗಿ ಸೂಕ್ತವಾದ  ವಿವಿಧ ಜಾತಿಯ ದೇಶಿಯ ಹಾಗೂ ವಿದೇಶಿಯ ಹಣ್ಣಿನ ತೋಟವನ್ನು ಅಭಿವೃದ್ದಿಪಡಿಸುವ ನಿಟ್ಟಿನಿಂದ ತೆಕ್ಕಟ್ಟೆಯ ರೈಸ್‌ಮಿಲ್‌ ಉದ್ಯಮಿ ರಮೇಶ್‌ ನಾಯಕ್‌ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ , ಸುಮಾರು 1634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ಉದ್ಯಮಿಯೋರ್ವರು ನಿಸರ್ಗ ಪ್ರೇಮ ಮೆರೆದು ಮಾದರಿಯಾಗಿದ್ದಾರೆ.

Advertisement

1634 ವಿವಿಧ ಜಾತಿಯ ಹಣ್ಣಿನ ಗಿಡಗಳ ನಾಟಿ : ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಮೇಲ್ಭಾಗಕ್ಕೆ  ಅಲ್ಲಿ ಸುಮಾರು 30 ಸಾವಿರ ಅನಾನಸ್‌ ಗಿಡಗಳನ್ನು ನಾಟಿ ಮಾಡಲಾಗಿದ್ದು, ಹಾಗೆಯೇ 2 ಗಿಡಗಳ ಮಧ್ಯದಲ್ಲಿ ಪಪ್ಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಯಲಾಗಿದೆ. ಈ ನಡುವೆ ಡೆಂಗ್‌ ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ ಸೂಪರ್‌ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರಾಗನ್‌ ಫ್ರೂಟ್‌ ಸೇರಿದಂತೆ ಡ್ಯುರಿಯನ್‌, ಮ್ಯಾಗೋಸ್ಟಿನ್‌, ಮಾವು, ಸಿಹಿ ಅಮಟೆ, ದಿವಿ ಹಲಸು, ಸೀಬೆ, ಮಿಂಟ್‌, ನಿಂಬು ಸೇರಿದಂತೆ ಒಟ್ಟು 1634 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ತೋಟದಲ್ಲಿ ಮೈದಳೆದು ನಿಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next