Advertisement

ಖಾಸಗಿ ನಿರ್ವಹಣೆಗೆ ತೇಜಸ್‌ ಎಕ್ಸ್‌ಪ್ರೆಸ್‌

01:21 AM Jul 09, 2019 | Team Udayavani |

ಹೊಸದಿಲ್ಲಿ ದೇಶದಲ್ಲೇ ಮೊದಲ ಬಾರಿಗೆ ಖಾಸಗಿಯವರಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಈ ಯೋಜನೆ ಅಡಿಯಲ್ಲಿ ದಿಲ್ಲಿ-ಲಖನೌ ಮಧ್ಯೆ ಸಂಚರಿಸುವ ತೇಜಸ್‌ ಎಕ್ಸ್‌ಪ್ರೆಸ್‌ ರೈಲು ಮೊದಲ ಬಾರಿಗೆ ಖಾಸಗಿ ಪಾಲಾಗಲಿದೆ.

Advertisement

ರೈಲ್ವೆ ಕಾರ್ಮಿಕರ ಪ್ರತಿಭಟನೆಯ ಮಧ್ಯೆಯೂ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟಿದ್ದು, ಎರಡನೇ ಮಾರ್ಗವನ್ನು ಆಯ್ಕೆ ಮಾಡುವಲ್ಲಿ ರೈಲ್ವೆ ಮಂಡಳಿ ಕಾರ್ಯನಿರತವಾಗಿದೆ. ಆರಂಭದಲ್ಲಿ ಈ ರೈಲನ್ನು ಐಆರ್‌ಸಿಟಿಸಿ ನಿರ್ವಹಣೆ ಮಾಡಲಿದೆ. ಐಆರ್‌ಸಿಟಿಸಿಯೇ ಈ ರೈಲಿನ ಖರ್ಚುವೆಚ್ಚಗಳನ್ನು ರೈಲ್ವೇ ಇಲಾಖೆಗೆ ಭರಿಸಲಿದೆ.

ಆದರೆ ಖಾಸಗಿ ಕಂಪೆನಿಗಳಿಗೆ ಬಿಡ್ಡಿಂಗ್‌ ಮೂಲಕ ನೀಡಲಾಗುತ್ತದೆ. ಒಟ್ಟು ಎರಡು ರೈಲುಗಳನ್ನು ಈ ಯೋಜನೆ ಅಡಿಯಲ್ಲಿ ಖಾಸಗಿಗೆ ನೀಡಲು ನಿರ್ಧರಿಸಲಾಗಿದೆ. 100 ದಿನಗಳಲ್ಲಿ ರೈಲನ್ನು ಖಾಸಗಿ ಕಂಪೆನಿಗೆ ನೀಡಲು ಸರಕಾರ ತರಾತುರಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next