ಇಸ್ಲಾಮಾಬಾದ್: ಪಾಕಿಸ್ತಾನದ ಮಾಧ್ಯಮಗಳು, ಪತ್ರಕರ್ತರು ಯಾವುದೇ ಕಾರಣಕ್ಕೂ ತಾಲಿಬಾನಿಗಳನ್ನು “ಉಗ್ರ’ರೆಂದು ಕರೆಯಬಾರದು ಎಂದು ಇಲ್ಲಿನ ನಿಷೇಧಿತ ತೆಹ್ರೀಕ್ ಐ ತಾಲಿಬಾನ್ ಪಾಕಿಸ್ತಾನ್(ಟಿಟಿಬಿ) ಸಂಘಟನೆ ಎಚ್ಚರಿಸಿದೆ.
ಇದನ್ನೂ ಓದಿ:ರಾಮ್ ಚರಣ್ ನಟನೆಯ ಮತ್ತೊಂದು ಸಿನಿಮಾ ಶೂಟಿಂಗ್ ಶುರು : ವಿಶೇಷವಾಗಿದೆ ಪೋಸ್ಟರ್
ಅನೇಕ ಮಾಧ್ಯಮಗಳು ತಾಲಿಬಾನಿಗಳನ್ನು ಮತ್ತು ಟಿಟಿಬಿಯನ್ನು ಉಗ್ರರೆಂದು ಕರೆಯುತ್ತಿವೆ. ನಾವು ಎಲ್ಲ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದೇವೆ. ಹೀಗೆ ವರದಿ ಮಾಡುವುದು ಪಕ್ಷಪಾತ ಮಾಡಿದಂತಾಗುತ್ತದೆ. ಪತ್ರಕರ್ತರು ತಮ್ಮ ಕರ್ತವ್ಯದಲ್ಲಿ ಅಪ್ರಾಮಾಣಿಕತೆ ತೋರಿಸಿದಂತಾಗುತ್ತದೆ.
ಯಾರು ನಮ್ಮನ್ನು ಉಗ್ರರೆನ್ನುತ್ತಾರೋ ಅವರನ್ನು ನಾವು ಶತ್ರುಗಳೆಂದು ಪರಿಗಣಿಸುತ್ತೇವೆ. ನಮ್ಮನ್ನು ಉಗ್ರರೆನ್ನದೆ ಟಿಟಿಬಿ ಎಂದೇ ಕರೆಯಬೇಕೆಂದು ಟಿಟಿಬಿ ವಕ್ತಾರ ಮೊಹಮದ್ ಖುರಸಾನಿ ಎಚ್ಚರಿಸಿದ್ದಾನೆ.
2007ರಲ್ಲಿ ಪಾಕಿಸ್ತಾನಿ ತಾಲಿಬಾನ್ ಸಂಘಟನೆ ರಚನೆಯಾಗಿತ್ತು. ಭಾರೀ ಪ್ರಮಾಣದಲ್ಲಿ ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ 2008ರ ಆಗಸ್ಟ್ ನಲ್ಲಿ ಪಾಕ್ ಸರ್ಕಾರ ಪಾಕ್ ತಾಲಿಬಾನ್ ಸಂಘಟನೆಯನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಿತ್ತು.
ತೆಹ್ರೀಕ್ ಐ ತಾಲಿಬಾನ್ ಪಾಕಿಸ್ತಾನ್ ಉಗ್ರಗಾಮಿ ಸಂಘಟನೆಯ ಮೊದಲ ಮುಖ್ಯಸ್ಥ ಬೈತುಲ್ಲಾ ಮೆಹ್ಸುದ್ 2009ರಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದ ಎಂದು ವರದಿ ತಿಳಿಸಿದೆ.