Advertisement

ಮುಖದ ಸೌಂದರ್ಯಕ್ಕೆ ಕಾಂತಿಯ ಹಲ್ಲುಗಳೇ ಭೂಷಣ

04:51 PM Jan 07, 2022 | Team Udayavani |

ಗದಗ: ಹಲ್ಲುಗಳ ಸ್ವಚ್ಛತೆ, ಸುರಕ್ಷತೆ ಯಿಂದ ಉತ್ತಮ ಆರೋಗ್ಯ ಪಡೆಯ ಬಹುದಾಗಿದೆ. ಮುಖದ ಸೌಂದರ್ಯಕ್ಕೆ ಕಾಂತಿಯುಕ್ತ ಹಲ್ಲುಗಳೇ ಭೂಷಣ ಎಂದು ಡಾ|ಆರ್‌.ಬಿ.ಉಪ್ಪಿನ ಅವರು ಹೇಳಿದರು.

Advertisement

ಗದಗ-ಬೆಟಗೇರಿ ರೋಟರಿ ಕ್ಲಬ್‌ ದಿಂದ ತಾಲೂಕಿನ ಹರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಟೂಥ್‌ಬ್ರಷ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿ ದಂತಗಳ ರಕ್ಷಣೆ ಅವಶ್ಯಕವಾಗಿದೆ. ಪುಟ್ಟ ವಯಸ್ಸಿನಲ್ಲಿ ಹಲ್ಲುಗಳಲ್ಲಿ ಹುಳುಕು ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಅದನ್ನು ತಡೆಗಟ್ಟಲು ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛಗೊಳಿಸುವ ರೂಢಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್‌ ಅಧ್ಯಕ್ಷ ಅರವಿಂದಸಿಂಗ್‌ ಬ್ಯಾಳಿ, ರೋಟರಿ ಕ್ಲಬ್‌ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಮಕ್ಕಳಿಗೆ ಹಲ್ಲುಗಳ ಸ್ವಚ್ಛತೆ, ಅವುಗಳ ಉಪಯೋಗ ಮುಂತಾದ ತಿಳಿವಳಿಕೆಯ ಕಾರ್ಯ ಕ್ರಮಗಳನ್ನು ಕ್ಲಬ್‌ ವತಿಯಿಂದ ಆಯೋಜನೆ ಮಾಡುತ್ತಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಕೆ.ಎಫ್‌.ಹಳಾಳ ಹಾಗೂ ಎಸ್‌.ಪಿ. ಹಿರೇಮಠ ಮಾತನಾಡಿ, ಮಕ್ಕಳು ಆರೋಗ್ಯದಿಂದಿರಲು ಸ್ವಚ್ಛತೆ, ಉತ್ತಮ ಆಹಾರ ಸೇವನೆ ಅವಶ್ಯಕವಾಗಿದೆ. ಅದರೊಂದಿಗೆ ಹಲ್ಲುಗಳ ರಕ್ಷಣೆ ಪ್ರಮುಖವಾಗಿದೆ. ಪ್ರತಿದಿನ ಊಟದ ಮೊದಲು ಹಾಗೂ ಊಟದ ನಂತರ ಹಲ್ಲು ಸ್ವಚ್ಛಗೊಳಿಸುವ ಪ್ರಕ್ರಿಯೆ ರೂಢಿಸಿಕೊಂಡರೆ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ ಹಲ್ಲುಗಳು ಹುಳುಕಿನ ಬಾಧೆಯಿಂದ ರಕ್ಷಣೆಗೊಳ್ಳುತ್ತವೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ಇದೇ ವೇಳೆ ಶಾಲಾ ಮಕ್ಕಳ ದಂತ ತಪಾಸಣಾ ಶಿಬಿರ ನಡೆಯಿತು. ರೊಟೇರಿಯನ್‌ ಎಸ್‌.ಎಸ್‌. ಹೊಸಳ್ಳಿಮಠ, ಜಿ.ಎಂ.ಅಣ್ಣಿಗೇರಿ, ಸಿ.ಎಸ್‌.ಬಾರಿಗಿಡದ, ಹಾಗೂ ಶಿಕ್ಷಕರಾದ ಟಿ.ಎಸ್‌.ಬಡ್ನಿ, ಆರ್‌. ಕೆ.ಕುದರಿಯವರ, ಸುವಾಸಿನಿ ಬಿರಾದಾರ, ವಿ.ಎಚ್‌.ಬಿಂಕದಕಟ್ಟಿ, ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಎಚ್‌.ಎಚ್‌.ಹಳ್ಳಿಕೇರಿ ಸ್ವಾಗತಿಸಿ, ಕ್ಲಸ್ಟರ್‌ ಸಿಆರ್‌ಪಿ ಐ.ಎ.ಗಾಡಗೋಳಿ ನಿರೂಪಿಸಿ, ವಿ.ಆರ್‌.ಕೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next