Advertisement

50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಒಂದೇ ವಾರದಲ್ಲಿ ಕಿತ್ತೋಯ್ತು; ಗ್ರಾಮಸ್ಥರ ಆಕ್ರೋಶ

07:14 PM Feb 02, 2023 | Team Udayavani |

ತೀರ್ಥಹಳ್ಳಿ: ತಾಲೂಕಿನ ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡೆಮನೆ ಸಂಪರ್ಕ ರಸ್ತೆ ಕಳೆದ ಒಂದು ವಾರದ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದೀಗ ಒಂದು ವಾರಕ್ಕೆ ರಸ್ತೆ ಕಿತ್ತು ಬಂದಿದೆ. ಈ ಬಗ್ಗೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ರಸ್ತೆ ಟಾರು ಕೈಯಲ್ಲಿ ಕೀಳುವ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ.

Advertisement

ಗುರುವಾರ ರಸ್ತೆಯಲ್ಲಿ ಸೇರಿದ ಗ್ರಾಮಸ್ತರು ಕೈಯಲ್ಲೇ ಟಾರ್ ರಸ್ತೆ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರಟೂರು ಗ್ರಾಮ ಪಂಚಾಯತ್ ಹೊರಣಿ ಗ್ರಾಮದ ಜಿಗಳಗೋಡಿನಿಂದ ಕಡೆಮನೆಗೆ ಒಂದು ವರೆ ಕಿಮೀ ಸಂಪರ್ಕ ರಸ್ತೆ ಇದಾಗಿದೆ. ಸುಮಾರು 28 ಮನೆಗಳಿವೆ.

ಶಾಸಕ ಆರಗ ಜ್ಞಾನೇಂದ್ರ ರವರು ಅನುದಾನ ತಂದಿದ್ದಾರೆ. ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಇನ್ನು ರಸ್ತೆಗೆ ಟಾರು ಹಾಕುವಾಗ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕಳಪೆ ಹಾಕಲಾಗಿದೆ. ಕಾಲು ಇಂಚು ಕೂಡ ಟಾರು ಹಾಕಿಲ್ಲ. ಇದರಿಂದಾಗಿ ಎಲ್ಲಾ ಕಡೆ ರಸ್ತೆ ಹೊಂಡ ಬಿದ್ದಿದೆ. ತಕ್ಷಣ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ತನಿಖೆ ನಡೆಸಿ ಕಾಮಗಾರಿ ಸರಿಪಡಿಸಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ರಸ್ತೆ ಕಾಮಗಾರಿ ಜತೆಗೆ ರಸ್ತೆ ಅಕ್ಕಪಕ್ಕ ಹಾಕಿದ ಮಣ್ಣು ಕೂಡ ಸರಿಯಾಗಿ ಹಾಕಿಲ್ಲ. ಮಣ್ಣು ಅಲ್ಲಲ್ಲಿ ಹೊಯ್ಯಲಾಗಿದೆ. ಇದು ಮಳೆಗಾಲದಲ್ಲಿ ಕೊಚ್ಚಿ ಹೋಗಿ ಚರಂಡಿಗೆ ಸೇರಲಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಲಿದೆ ಎಂದು ಊರಿನ ಗ್ರಾಮಸ್ತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಾತನಾಡುವಾಗ ಕಾಮನ್ ಸೆನ್ಸ್ ಇರಬೇಕು: ಆರಗ ವಿರುದ್ಧ ಮಾಜಿ ಸಚಿವ ಕಿಮ್ಮನೆ ವಾಗ್ದಾಳಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next