Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ :ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಡವಟ್ಟು ಮಾಡಿದ್ರ ?

11:06 AM Aug 13, 2022 | sudhir |

ತೀರ್ಥಹಳ್ಳಿ : ದೇಶಾದ್ಯಂತ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ದೇಶದ ಹಬ್ಬವಾಗಿ ಆಚರಿಸುತ್ತಿದ್ದು ಇಂದಿನಿಂದ ಆಗಸ್ಟ್ ಹದಿನೈದರವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ.

Advertisement

ದೇಶಪ್ರೇಮಿಗಳು ತ್ರಿವರ್ಣ ಧ್ವಜಕ್ಕೆ ಪೂಜೆ ನೆರವೇರಿಸಿ ಮನೆಯ ಮುಂಭಾಗ ಹಾಗೂ ಮನೆಯ ಮೇಲೆ ಬಾವುಟವನ್ನು ಹಾರಿಸಿ ಗೌರವ ವಂದನೆ ನೀಡಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾ ಇರುವಾಗ ಇತ್ತ ಶಿಕ್ಷಣ ಅಧಿಕಾರಿ ನಾಮಕ ಅವಸ್ಥೆಯಿಂದ ಬೇಜವಾಬ್ದಾರಿಯಾಗಿ ರಾಷ್ಟ್ರದ ದ್ವಜ ಹಾರಿಸಿದ ದೃಶ್ಯ ಪಟ್ಟಣ ಶಿಕ್ಷಣ ಅಧಿಕಾರಿ ಕಛೇರಿಯಲ್ಲಿ ನಡೆದಿದೆ.

ಈ ರೀತಿ ಮಕ್ಕಳಿಗೆ ತಿಳಿ ಹೇಳುವ ಸರ್ಕಾರಿ ಅಧಿಕಾರಿಗಳು ತ್ರಿವರ್ಣಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.

ಕಾರಣ ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನೆರವೇರಿಸಿದ ಧ್ವಜಾರೋಹಣದಲ್ಲಿ ಎಡವಟ್ಟು ಎದ್ದು ಕಾಣಿಸುತ್ತಿದೆ ರಾಜ್ಯ ಸರ್ಕಾರದ ಗೃಹ ಸಚಿವರ ಸ್ವಕ್ಷೇತ್ರ ತೀರ್ಥಹಳ್ಳಿಯ ಶಿಕ್ಷಣ ಇಲಾಖೆಯಲ್ಲಿ ತಮ್ಮ ಕಚೇರಿಯಲ್ಲಿ ಕಬ್ಬಿಣದ ಸಲಾಕೆ ಒಂದಕ್ಕೆ ತ್ರಿವರ್ಣ ಧ್ವಜವನ್ನು ಕಟ್ಟಿದ್ದಲ್ಲದೆ ವ್ಯಕ್ತಿಯ ಎದೆ ಭಾಗಕ್ಕಿಂತ ಎತ್ತರಕ್ಕೆ ಧ್ವಜಾರೋಹಣವನ್ನು ನೆರವೇರಿಸಬೇಕಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳು ವ್ಯಕ್ತಿಯ ಎದೆಯ ಭಾಗಕ್ಕಿಂತಲೂ ಕೇಳಭಾಗದಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ್ದಾರೆ.

ತೀರ್ಥಹಳ್ಳಿ ಶಿಕ್ಷಣಾಧಿಕಾರಿ ಆನಂದ್ ಕುಮಾರ್ ಈ ಸಾಮಾನ್ಯ ಜ್ಞಾನವೂ ಇಲ್ಲದೆ ಬೇಕಾಬಿಟ್ಟಿ ಧ್ವಜಾರೋಹಣ ನೆರವೇರಿಸಿದ್ದು ಜಿಲ್ಲಾಧಿಕಾರಿಗಳು ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ
ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Advertisement

ಇದನ್ನೂ ಓದಿ : 3 ವರ್ಷದಲ್ಲಿ 36000 ಕಿ.ಮೀ. ಸೈಕಲ್ ತುಳಿದ ಮಾಜಿ ಯೋಧನ ಜೊತೆ ತಿರಂಗಾ ಆಚರಿಸಿದ ಮಲೆನಾಡಿಗರು

Advertisement

Udayavani is now on Telegram. Click here to join our channel and stay updated with the latest news.

Next