Advertisement

ಹಿರಿಯರ ಒಪ್ಪಿಗೆ ಇಲ್ಲದ ಪ್ರೇಮ ಸಂಬಂಧ : ಯುವ ಜೋಡಿ ಆತ್ಮಹತ್ಯೆ

01:47 PM Feb 01, 2019 | Team Udayavani |

ಕೊಯಮುತ್ತೂರು : ಕೇರಳದ ಹದಿ ಹರೆಯದ ಜೋಡಿಯೊಂದು ಧಾವಿಸಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

Advertisement

ಈ ಜೋಡಿ ಕೇರಳದ ಅಡೂರ್‌ ನಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದು  ಇವರು 19 ಮತ್ತು 18ರ ಹರೆಯದವರಾಗಿದ್ದಾರೆ. ತಮ್ಮ ಪ್ರೇಮ ಸಂಬಂಧಕ್ಕೆ ಹಿರಿಯರ ಒಪ್ಪಿಗೆ ಇಲ್ಲದಿರುವ ಕಾರಣಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ನಿನ್ನೆ ಗುರುವಾರ ರಾತ್ರಿ ಈ ಜೋಡಿ ಕೇರಳದ ಕೊಲ್ಲಂ ನಲ್ಲಿ ರೈಲು ಹತ್ತಿ ಇಂದು ನಸುಕಿನ ವೇಳೆ ಪೊದನೂರಿನಲ್ಲಿ ಇಳಿದು ರೈಲು ಹಳಿಯ ಮೇಲೆ ನಡೆಯುತ್ತಾ ಸಾಗಿ ನಂಜುಡಪುರಂ ಪಟ್ಟಣಕ್ಕೆ ಸಮೀಪ,  ಧಾವಿಸಿ ಬರುತ್ತಿದ್ದ  ಕೊಲ್ಲಂ – ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನ ಮುಂದೆ ಜಿಗಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next