ಅಭಿಗ್ಯಾ ಆನಂದ್ ಎಂಬ ಕಿರಿಯ ಜ್ಯೋತಿಷಿಯೊಬ್ಬ 2019ರ ಆಗಸ್ಟ್ ನಲ್ಲಿಯೇ ಭವಿಷ್ಯ ನುಡಿದಿರುವ ವಿಷಯ ತುಂಬಾ ವೈರಲ್
ಆಗತೊಡಗಿದೆ.
Advertisement
2019ರ ನವೆಂಬರ್ ಹೊತ್ತಿಗೆ ಜಗತ್ತಿಗೆ ಮಹಾಕಂಟಕವೊಂದು ಎದುರಾಗಲಿದೆ. ದೊಡ್ಡ ರೋಗವೊಂದು ಜಗತ್ತನ್ನು ಆವರಿಸಲಿದ್ದು, ಇದುಜಗತ್ತನ್ನು ಒಂಬತ್ತು ತಿಂಗಳ ಕಾಲ ಕಾಡಿಸಲಿದೆ ಎಂದು ಆನಂದ್ ಭವಿಷ್ಯ ನುಡಿದಿರುವುದು ಇದೀಗ ಬಹು ಚರ್ಚೆಗೆ ಗ್ರಾಸವಾಗಿದೆ.
14 ವರ್ಷದ ಅಭಿಗ್ಯಾ ಆನಂದ್ ಎಂಬ 14 ವರ್ಷದ ಹುಡುಗ ಭವಿಷ್ಯ ನುಡಿದಿರುವ ವಿಡಿಯೋ ತುಣುಕ ಭರ್ಜರಿಯಾಗಿ ಸದ್ದು
ಮಾಡತೊಡಗಿದೆ. ಬಹುತೇಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ನನ್ನ ಭವಿಷ್ಯವಾಣಿ ಬಗ್ಗೆ ಲೇಖನ ಪ್ರಕಟಿಸಿವೆ.
ಆದರೆ ಅದರಲ್ಲಿ ಕೋವಿಡ್ 19 ಮೇ 29ಕ್ಕೆ ಅಂತ್ಯಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಆದರೆ ನನ್ನ ಮೊದಲಿನ ವಿಡಿಯೋದಲ್ಲಿ ನಾನು
ಹಾಗೆ ಹೇಳಿಲ್ಲ. ಯಾಕೆಂದರೆ ಮೇ 29ಕ್ಕೆ ಕೋವಿಡ್ ಸೋಂಕು ಅಂತ್ಯಗೊಳ್ಳುವುದಿಲ್ಲ. ಮೇ 29ರವರೆಗೆ ಸೋಂಕಿನ ಪ್ರಮಾಣ
ಕಡಿಮೆಯಾಗಲಿದೆ ಎಂದು ತಿಳಿಸಿದ್ದೆ ಎಂದು ಕಿರಿಯ ಜ್ಯೋತಿಷಿ ಸ್ಪಷ್ಟನ ನೀಡಿರುವುದಾಗಿ ವರದಿ ತಿಳಿಸಿದೆ. ಅಭಿಗ್ಯಾ ಆನಂದ್ ಪ್ರಕಾರ, 2020ರ ಜೂನ್ ವರೆಗೂ ಜಾಗತಿಕವಾಗಿ ಯಾವುದೇ ಸಂತಸದ ಸುದ್ದಿ ಸಿಗೋದಿಲ್ಲ. ಯಾಕೆಂದರೆ
ಕೋವಿಡ್ ವೈರಸ್ ಜುಲೈ ನಂತರವೇ ನಿಧಾನಕ್ಕೆ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Related Articles
ಜ್ಯೋತಿಷಿ ಆನಂದ್ ಪ್ರಕಾರ, ಒಂದು ವೇಳೆ ಕೋವಿಡ್ 19 ವೈರಸ್ ಗೆ ಮನುಷ್ಯ ಲಸಿಕೆಯನ್ನು ಕಂಡುಹಿಡಿದರೆ ಇನ್ನಷ್ಟು ವೈರಸ್ ಗಳು
ಮನುಷ್ಯ ಜನಾಂಗದ ಮೇಲೆ ಹರಡುವ ಸಾಧ್ಯತೆ ಇದ್ದಿರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಕೋವಿಡ್ 19 ಗೆ ಲಸಿಕೆ ಕಂಡು
ಹಿಡಿದರೆ, ಇನ್ನಷ್ಟು ವೈರಸ್ ಗಳು, ಸೂಪರ್ ಬಗ್ಸ್(ಇದೊಂದು ಸೂಕ್ಷ್ಮಾಣುಜೀವಿ. ಇದರ ಪೂರ್ಣ ಹೆಸರು ಮಿಥಿಸಿಲಿನ್ ರೆಸಿಸ್ಟಂಟ್
ಸ್ಟಾಫಿಲೋಕೋಕಸ್ ಆರಿಯಸ್) ಬ್ಯಾಕ್ಟೀರಿಯಾಗಳು ಬರಲಿದೆ. ಹೀಗಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು
ಹೆಚ್ಚಿಸಿಕೊಳ್ಳಬೇಕಾಗಿದೆ. ಸಾವಯವ ಗೊಬ್ಬರಗಳಿಂದ ಉತ್ಪಾದಿಸಿದ ವಸ್ತುಗಳನ್ನೇ ಹೆಚ್ಚು ಸೇವಿಸಬೇಕು ಎಂದು ಅಭಿಗ್ಯಾ ಸಲಹೆ
ನೀಡಿದ್ದಾರೆ.
Advertisement
ವರ್ಷಾಂತ್ಯಕ್ಕೆ ಮತ್ತೊಂದು ಸೋಂಕು ಬಡಿದಪ್ಪಳಿಸಲಿದೆ!ಕಿರಿಯ ಜ್ಯೋತಿಷಿಯ ಭವಿಷ್ಯವಾಣಿ ಪ್ರಕಾರ, ಭಾರತದಲ್ಲಿ 2020ರ ಡಿಸೆಂಬರ್ 20ರಂದು ಮತ್ತೊಂದು ವೈರಸ್ ಜನರಿಗೆ ಹರಡಲಿದೆ
ಎಂದು ಎಚ್ಚರಿಸಿದ್ದಾನೆ. ಈ ವೈರಸ್ ಹಾವಳಿ 2021ರ ಮಾರ್ಚ್ 31ರವರೆಗೂ ಮುಂದುವರಿಯಲಿದೆ. ಅಲ್ಲದೇ ಈ ಸೋಂಕು ಮಾರಿ
ಕೋವಿಡ್ 19ಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಭವಿಷ್ಯ ನುಡಿದಿದ್ದಾನೆ. ಗ್ರಹಕೂಟಗಳ ಅಧ್ಯಯನದಿಂದ ಈ ಎಲ್ಲಾ ಭವಿಷ್ಯಗಳನ್ನು ನುಡಿದಿರುವುದಾಗಿ ಅಭಿಗ್ಯಾ ತಿಳಿಸಿದ್ದು, ಗ್ರಹಗಳ ಗ್ರಹಣ, ಚಂದ್ರನ
ಜ್ಯಾಮಿತಿ ಭೂಮಿಯ ಮೇಲೆ ನಡೆಯುವ ಕಾರ್ಯಕ್ರಮಗಳ ಹೇಗೆ ಪರಿಣಾಮ ಬೀರಲಿದೆ ಎಂಬ ಬಗ್ಗೆ ಆನಂದ್ ವಿಶ್ಲೇಷಿಸಿರುವುದಾಗಿ
ವರದಿ ವಿವರಿಸಿದೆ. ಯಾರೀತ ಅಭಿಗ್ಯಾ ಆನಂದ್:
ದೇಶಾದ್ಯಂತ ಸದ್ದು ಮಾಡುತ್ತಿರುವ ಯುವ ಜ್ಯೋತಿಷಿ ಅಭಿಗ್ಯಾ ಆನಂದ್ ಕರ್ನಾಟಕದ ಶ್ರೀರಂಗಪಟ್ಟಣದ ಮೂಲ ಎಂದು ವರದಿ ತಿಳಿಸಿದೆ. ಅತೀ ಕಿರಿಯ ವಯಸ್ಸಿನಲ್ಲಿಯೇ ಆಯುರ್ವೇದ ಮೈಕ್ರೋ ಬಯೋಲಜಿ ಪದವಿ ಪಡೆದ ಹೆಗ್ಗಳಿಕೆ ಅಭಿಗ್ಯಾ ಆನಂದ್ ಅವರದ್ದು. ಇದೀಗ 14ನೇ ವಯಸ್ಸಿನ ಅಭಿಗ್ಯಾ ಜ್ಯೋತಿಷ್ಯಶಾಸ್ತ್ರ ಮತ್ತು ಇತರ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.
ತಂದೆ ಹೆಸರು ಆನಂದ್ ರಾಮಸುಬ್ರಮಣಿಯನ್, ತಾಯಿ ಅನ್ನು ಆನಂದ್. 2006ರಲ್ಲಿ ಅಭಿಗ್ಯಾ ಜನನವಾಗಿತ್ತು. ಈತನ ಸಹೋದರಿ ಹೆಸರು ಅಭಿಧೇಯಾ ಆನಂದ್. ಅಭಿಗ್ಯಾ ಶ್ರೀರಂಗಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ.