Advertisement
ರಸ್ತೆಯ ವಿಸ್ತರೀಕರಣದ ಸಂದರ್ಭ ಆಲದ ಮರದ ಬುಡದಲ್ಲಿ ಸುಮಾರು ಏಳು ಆಡಿಗಳಷ್ಟು ಆಳ ಮಾಡಿ ಮಣ್ಣು ತೆಗೆಯಲಾಗಿದೆದ್ದು, ರಸ್ತೆಗೆ ಸಮತಟ್ಟಿಗೆ ಬಳಸಲಾಗಿದೆ. ಅಲ್ಲದೇ ಒಂದು ಪಾರ್ಶ್ವದಲ್ಲಿ ಮರ ಕಡಿಯಲಾಗಿದೆ. ಇದರಿಂದ ಬೃಹತ್ ಆಲದ ಮರ ಸಮತೋಲನ ಕಳೆದುಕೊಂಡಿದ್ದು ಅಪಾಯ ಆಹ್ವಾನಿಸುತ್ತಿದೆ. ಅಲ್ಲದೇ ವಿದ್ಯುತ್ ತಂತಿಗಳು ಸಹ ಇದರ ಪಕ್ಕದಲ್ಲಿಯೇ ಹಾದು ಹೋಗಿ ಸಮಸ್ಯೆ ಸೃಷ್ಟಿಸಿದೆ. ಮರ ತೆರವು ಬಗ್ಗೆ 2017ರಲ್ಲಿಯೇ ಕುರ್ಕಾಲು ಗ್ರಾಮ ಪಂಚಾಯತ್‌ಗೆ ಮನವಿ ನೀಡಲಾಗಿದ್ದು, ಆದರೂ ಸೂಕ್ತ ಕ್ರಮಕೈಗೊಂಡಿಲ್ಲ.
ಆಲದ ಮರ ಆಧಾರ ತಪ್ಪಿದಲ್ಲಿ ತೊಂದರೆ ಶತಸಿದ್ಧ. ಇಲಾಖೆ ಗಮನ ಹರಿಸಿ ಗಂಭೀರ ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಆಲದ ಮರವನ್ನು ಅರ್ಧ ಕಡಿದು ಬಿಟ್ಟಿದ್ದಾರೆ. ಹಲವಾರು ಬಸ್ಸು, ವಾಹನ, ಜನ ಸಂಚಾರ ಇರುವ ರಸ್ತೆ ಇದಾಗಿದ್ದು, ಅಪಾಯ ಕಟ್ಟಿಟ್ಟ ಬುತ್ತಿ. ಹೈಟೆನ್ಷನ್ ವಿದ್ಯುತ್ ತಂತಿಯೂ ಇಲ್ಲಿದ್ದು ಅಪಾಯ ಹೆಚ್ಚಿದೆ ಎಂದು ನಾಗರಿಕರು ದೂರಿಕೊಂಡಿದ್ದಾರೆ.