Advertisement

ತಾಂತ್ರಿಕ ದೋಷ ಹಿನ್ನೆಲೆ: ಸ್ಪೈಸ್‌ ಜೆಟ್‌ ಶೇ 50 ವಿಮಾನಗಳಿಗೆ ಮಾತ್ರ ಅನುಮತಿ

09:49 PM Jul 27, 2022 | Team Udayavani |

ನವದೆಹಲಿ: 8 ವಾರಗಳ ಕಾಲ ಶೇ. 50 ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ಸ್ಪೈಸ್‌ಜೆಟ್‌ ಸಂಸ್ಥೆಗೆ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಆದೇಶಿಸಿದೆ.

Advertisement

ಇತ್ತೀಚಿನ ದಿನಗಳಲ್ಲಿ ಸ್ಪೈಸ್‌ಜೆಟ್‌ ವಿಮಾನಗಳಲ್ಲಿ ತಾಂತ್ರಿಕ ದೋಷ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಈ ಆದೇಶ ಮಾಡಲಾಗಿದೆ. ಹಾಗಿದ್ದರೂ ಈ ಆದೇಶದಿಂದ ಸ್ಪೈಸ್‌ಜೆಟ್‌ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪೈಸ್‌ಜೆಟ್‌ ತನ್ನ ಪ್ರಯಾಣಿಕರಿಗೆ ತಿಳಿಸಿದೆ.

ಇದು ಕಡಿಮೆ ವಿಮಾನ ಹಾರಾಟವಾಗುವ ಸಮಯವಾಗಿದ್ದು, ಡಿಜಿಸಿಎ ಆದೇಶದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ. ಯಾವುದೇ ಟಿಕೆಟ್‌ ರದ್ದು ಆಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಈ ಎಂಟು ವಾರಗಳ ಕಾಲ ಡಿಜಿಸಿಎ ಸ್ಪೈಸ್‌ಜೆಟ್‌ ವಿಮಾನಗಳ ಮೇಲೆ ಕಣ್ಗಾವಲಿರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next