Advertisement

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

09:04 PM Sep 18, 2021 | Team Udayavani |

ದೇವನಹಳ್ಳಿ: ತಾಂತ್ರಿಕ ದೋಷದಿಂದ ಏರ್‌ ಇಂಡಿಯಾ ವಿಮಾನವೊಂದು ರನ್ ವೇನಲ್ಲೇ ನಿಂತ ಘಟನೆ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು(ಶನಿವಾರ) ಬೆಳಗ್ಗೆ ನಡೆದಿದೆ.

Advertisement

ಬೆಂಗಳೂರಿನಿಂದ ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ (ಎಐ 505) ವಿಮಾನ ಟೆಕ್ ಆಫ್ ವೇಳೆ ಮುಂಭಾಗದ ಚಕ್ರಗಳು ಜಾಮ್ ಆಗಿದ್ದರಿಂದ ತಾಂತ್ರಿಕ ದೋಷ ಕಂಡು ಬಂದಿತು. ಪರಿಣಾಮ ಕೆಲವು ಹೊತ್ತು ರನ್ ವೇ ನಲ್ಲೆ ವಿಮಾನ ನಿಂತಿತು. ಹೊಸ ರನ್ ವೇ ಮೂಲಕ ಬೇರೆ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್ ಗೆ ಅವಕಾಶ ಮಾಡಿಕೊಡಲಾಗಿತ್ತು.

ಮೂರು ಗಂಟೆಗಳ ಬಳಿಕ ಡಿಜಿಸಿಎ ಅನುಮತಿ ಸಿಕ್ಕಿದ ಬಳಿಕ ವಿಮಾನ ಹಾರಾಟ ನಡೆಸಲು ಸಿದ್ಧವಾಗಿದೆ. ಏರ್‌ ಇಂಡಿಯಾ ಕಂಪನಿ ಬಸ್ ಮೂಲಕ ಪ್ರಯಾಣಿಕರನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಕರೆತರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next