Advertisement

ವಿಶೇಷ ಚೇತನರಿಗೆ ತಾಂತ್ರಿಕ ಶಿಕ್ಷಣ ನೀಡಲಿ

03:16 PM Nov 14, 2022 | Team Udayavani |

ಮೈಸೂರು: ವಿಶೇಷಚೇತನ ಮಕ್ಕಳು ಸ್ವಂತ ಬದುಕು ಕಟ್ಟಿಕೊಳ್ಳಲು ತಾಂತ್ರಿಕ ಶಿಕ್ಷಣ ನೀಡುವಂತೆ ಕೆಲವು ಸಂಘ ಸಂಸ್ಥೆ ಗಳೊಂದಿಗೆ ಸರ್ಕಾರಕ್ಕೆ ಮನವಿ ಮಾಡುವು ದಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆ ಆವರಣದಲ್ಲಿ ಇನ್ನರ್‌ವ್ಹೀಲ್‌ ಆಫ್ ಮೈಸೂರು ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪೂರ್ಣ ಗೊಳಿಸಿದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ದೊರೆತರೆ ಉದ್ಯೋಗ ಪಡೆದು ಜೀವನ ನಿರ್ಮಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ನುಡಿದರು. ವಿಶೇಷ ಚೇತನ ಮಕ್ಕಳಲ್ಲಿ ಇತರರಿಗಿಂತಲೂ ವಿಶಿಷ್ಟವಾದ ಗ್ರಹಿಕಾ ಶಕ್ತಿ ಹೆಚ್ಚಿದೆ. ವಿಶೇಷ ಚೇತನ ಮಕ್ಕಳು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದನ್ನು ನೋಡಿದಾಗ ನನಗೆ ಬಹಳ ಸಂತೋಷ ವಾಗುತ್ತದೆ.ಈ ಮಕ್ಕಳು ಹೆಚ್ಚಿನ ಪ್ರಮಾಣ ದಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಹಿರಿಯ ರಂಗ ಕರ್ಮಿ ಬಿ.ಎಂ.ರಾಮ ಚಂದ್ರ ಮಾತನಾಡಿ, 26 ವರ್ಷದಿಂದಲೂ ನನಗೆ ಮತ್ತು ಈ ಶಾಲೆಗೆ ಉತ್ತಮ ಸಂಬಂಧವಿದೆ. ಶಾಲೆ ಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವ ಮಕ್ಕಳಿಗೆ ವಸ್ತ್ರಾಲಂಕಾರ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.

1901ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು 9 ಎಕರೆ ಭೂಮಿಯನ್ನು ಅಂಧ ಮಕ್ಕಳ ವಿದ್ಯಾಭ್ಯಾಸಕ್ಕೆಂದು ನೀಡಿ ದ್ದಾರೆ. ಆದರೆ, ಇಂದು ನಗರ ಪಾಲಿಕೆ ಯರು ಈ ಶಾಲೆ ಆವರಣದಲ್ಲಿ ವಾಟರ್‌ ಟ್ಯಾಂಕ್‌ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ನಗರ ಪಾಲಿ ಕೆ ಯಿಂದ ಶಾಲೆಯ ಆವರಣದಲ್ಲಿ ಟ್ಯಾಂಕ್‌ ನಿರ್ಮಿಸಲು ಮುಂದಾಗಿರುವುದನ್ನು ತಡೆಯಬೇಕು ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳ ತಂಡ ತಮ್ಮ ಸಹಿ ಸಂಗ್ರಹದ ಮೂಲಕ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್‌ ಗೆ ಮನವಿ ಸಲ್ಲಿಸಿತು.

Advertisement

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್‌.ಮಾಲಿನಿ, ಇನ್ನರ್‌ವೀಲ್‌ ಆಫ್ ಮೈಸೂರು ಸಂಸ್ಥೆಯ ಗೌರಿ ಗೋಕುಲ್‌, ಕಾರ್ಯದರ್ಶಿ ಪಲ್ಲವಿ ಅರುಣ್‌, ಡಾ.ಗೋವ ರ್ಧನ್‌, ಬಸವರಾಜು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next