Advertisement
ಮೀನುಗಾರರು 2017- 18 ಮತ್ತು 2018- 19ರಲ್ಲಿ ವಾಣಿಜ್ಯ ಮತ್ತು ಗ್ರಾಮ ಅಭಿ ವೃದ್ಧಿ ಬ್ಯಾಂಕ್‌ಗಳಿಂದ ತಲಾ 50 ಸಾವಿರ ರೂ.ಗಳಂತೆ ಸ್ವಸಹಾಯ ಸಂಘಗಳ ಮೂಲಕ ಪಡೆದ ಸಾಲವನ್ನು ಮನ್ನಾ ಮಾಡಲು ಸರಕಾರ ಆದೇಶ ಹೊರಡಿಸಿತ್ತು. ನವೆಂಬರ್‌ನಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಡೆದಿದೆ.
ಹಣ ಸಕಾಲದಲ್ಲಿ ಪಾವತಿ ಆಗದಿರಲು ಹಲವು ಸಮಸ್ಯೆ ಗಳು ಕಾರಣ. ಕೆಲವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ.
ಮತ್ತೆ ಕೆಲವರ ಖಾತೆ ಖಾತೆ ಸ್ಥಗಿತಗೊಂಡಿದೆ. ಇನ್ನು ಕೆಲವರದು ಹೆಸರು ವ್ಯತ್ಯಾಸವಾಗಿದೆ. ಇಂತಹ ಇನ್ನೂ ಹಲವು ಕಾರಣಗಳಿವೆ. ಉಡುಪಿ ಯಲ್ಲಿ 4,050 ಮಂದಿಯ ಖಾತೆ ಸ್ಥಗಿತಗೊಂಡಿದ್ದರೆ, 7,300 ಮಂದಿಯ ಖಾತೆಗಳಲ್ಲಿ ಆಧಾರ್ ನೋಂದಣಿ, ಹೆಸರು ಬದಲಾವಣೆ ಗಳಾಗಿವೆ. ದಕ್ಷಿಣ ಕನ್ನಡದಲ್ಲಿ 329 ಮಂದಿಯ ಖಾತೆ ಸ್ಥಗಿತಗೊಂಡಿದ್ದರೆ, 891 ಮಂದಿಯ ಹೆಸರು ಬದಲಾವಣೆ, ಆಧಾರ್ ನೋಂದಣಿ ಆಗದಿರುವ ಸಮಸ್ಯೆಯಿದೆ. ಈಗ ಬಾಕಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗದಿರುವುದರಿಂದ ಗೊಂದಲ ಸೃಷ್ಟಿ ಯಾಗಿದೆ. ಕುಂದಾಪುರ ಭಾಗ ದಲ್ಲಿ ಅಧಿಕ ಮಂದಿಗೆ ಪಾವತಿ ಬಾಕಿಯಿದ್ದು, ಮೀನುಗಾರರು ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳಿಗೆ ತೆರಳಿ ವಿಚಾರಿಸಿ, ಅಲವತ್ತು ಕೊಳ್ಳುತ್ತಿರುವುದು ಕಂಡುಬರುತ್ತಿದೆ.
Related Articles
ಈ ಗೊಂದಲ ನಿವಾರಿಸಿ ಅರ್ಹರಿಗೆ ಹಣ ಪಾವತಿಯಾ ಗುವಂತೆ ಮಾಡಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್, ಆ ಬ್ಯಾಂಕಿನ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಈ ಸಮಿತಿಯು ಪ್ರತೀ ಸಹಕಾರಿ ಸಂಘ ಅಥವಾ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಮರು ಸರ್ವೇ ನಡೆಸಿ, ಮತ್ತೂಮ್ಮೆ ಪರಿಶೀಲಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
Advertisement
ಸರಕಾರ ಶೀಘ್ರವಾಗಿ ಮೀನುಗಾರರ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಿದೆ. ಈಗಾಗಲೇ 60 ಕೋ.ರೂ. ಬಿಡುಗಡೆ ಮಾಡಲಾಗಿದೆ. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ ಎಲ್ಲರ ಖಾತೆಗಳಿಗೂ ಸಕಾಲದಲ್ಲಿ ಹಣ ಜಮೆಯಾಗಿಲ್ಲ. ಅದನ್ನು ನಿವಾರಿಸಲು ಸಮಿತಿ ರಚಿಸಲಾಗಿದ್ದು, ಒಂದು ತಿಂಗಳೊಳಗೆ ಎಲ್ಲ ಗೊಂದಲ ನಿವಾರಣೆ ಗೊಂಡು ಬಾಕಿ ಮೀನುಗಾರರ ಖಾತೆಗಳಿಗೆ ಹಣ ಜಮೆಯಾಗಲಿದೆ. – ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು ಪ್ರಶಾಂತ್ ಪಾದೆ