Advertisement

ದೇಶಕ್ಕಾಗಿ ದೇಶದಲ್ಲಿಯೇ ಯೋಚಿಸಿ; ಪ್ರಧಾನಿ  ಮೋದಿ ಸಲಹೆ

10:07 PM Jan 15, 2022 | Team Udayavani |

ನವದೆಹಲಿ: ದೇಶದ ಸಾಧನೆಯಲ್ಲಿ ನವೋದ್ದಿಮೆಗಳ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ  ನವೋದ್ದಿಮೆಗಳು ದೇಶಕ್ಕಾಗಿ, ದೇಶದಲ್ಲಿಯೇ ಇರುವ ಸಮಸ್ಯೆ ನಿವಾರಿಸಲು ಸಂಶೋಧನೆ ನಡೆಸಬೇಕು ಎಂದೂ ಸಲಹೆ ನೀಡಿದ್ದಾರೆ.

Advertisement

ನವೋದ್ದಿಮೆಗಳ ಮುಖ್ಯಸ್ಥರ ಜತೆಗೆ ಶನಿವಾರ ನಡೆಸಿದ ವರ್ಚುವಲ್‌ ಸಂವಾದದಲ್ಲಿ ಮಾತನಾಡಿದ ಅವರು, ಉದ್ದಿಮೆ ಸ್ಥಾಪನೆ ಮಾಡುವವರಿಗೆ ಸರ್ಕಾರದ ಕೆಂಪು ಪಟ್ಟಿಯ ಸಮಸ್ಯೆಯಿಂದ ಮುಕ್ತಿಗೊಳಿಸುವುದಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ. ಜತೆಗೆ, ಇನ್ನು ಮುಂದೆ ಪ್ರತಿ ವರ್ಷದ ಜ.16 ಅನ್ನು “ರಾಷ್ಟ್ರೀಯ ಸ್ಟಾರ್ಟಪ್‌ ದಿನ’ವನ್ನಾಗಿ ಆಚರಿಸುವ ಘೋಷಣೆಯನ್ನೂ ಮಾಡಿದ್ದಾರೆ.

ನಮ್ಮ ದೇಶದಲ್ಲಿನ ನವೋದ್ದಿಮೆ (ಸ್ಟಾರ್ಟಪ್‌)ಗಳು ಒಟ್ಟಾರೆ ವ್ಯವಸ್ಥೆಯಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿವೆ. ಸ್ಟಾರ್ಟಪ್‌ಗಳೇ ನವಭಾರತದ ಬೆನ್ನೆಲುಬಾಗಲಿವೆ. ದೇಶದ ಸಮಸ್ಯೆಗಳನ್ನು ನಿವಾರಿಸಲು ದೇಶದಿಂದಲೇ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳೋಣ’ ಎಂದು ಮೋದಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಐದು ವರ್ಷಗಳ ಹಿಂದೆ ನಮ್ಮಲ್ಲಿ 500 ಸ್ಟಾರ್ಟಪ್‌ಗಳೂ ಇರಲಿಲ್ಲ. ಈಗ ಅವುಗಳ ಸಂಖ್ಯೆ 60 ಸಾವಿರ ದಾಟಿದೆ. ಈ ಪೈಕಿ 42 ಯುನಿಕಾರ್ನ್ ಸ್ಟಾರ್ಟಪ್‌ಗಳಾಗಿವೆ. ಸ್ಥಳೀಯವಾಗಿ ಸೀಮಿತವಾಗುವ ಬಗ್ಗೆ ಕನಸು ಕಾಣುವುದರ ಬದಲು, ವಿಶ್ವಮಟ್ಟಕ್ಕೆ ಬೆಳೆದು ಸಾಧಿಸುವ ಹಂಬಲ ಹೊಂದಿರಬೇಕು ಎಂದು ಸ್ಟಾರ್ಟಪ್‌ನ ಪ್ರವರ್ತಕರಿಗೆ ಕರೆ ನೀಡಿದ್ದಾರೆ.

Advertisement

ಮೂರು ಅಂಶಗಳು:
ಉದ್ದಿಮೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಹಲವು ಕ್ರಮಗಳ ವ್ಯಾಪ್ತಿಯಿಂದ ಮತ್ತು ಅಧಿಕಾರಶಾಹಿಯಿಂದ ಉದ್ಯಮಶೀಲತೆಗೆ ವಿನಾಯಿತಿ, ಹೊಸ ರೀತಿಯ ಸಂಶೋಧನೆ ಮತ್ತು ನಾವಿನ್ಯತೆಯ ಪ್ರೋತ್ಸಾಹಕ್ಕಾಗಿ ಕ್ರಮಗಳು, ಯುವ ಸಂಶೋಧಕರಿಗೆ ಮತ್ತು ಉದ್ಯಮಿಗಳಿಗೆ ಬೆಂಬಲವನ್ನು ಯಾವತ್ತೂ ನೀಡಲು ಸಿದ್ಧವೆಂದು ಪ್ರಧಾನಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next