Advertisement

ಜಿಯೋ, ಭಾರ್ತಿ ಏರ್‌ಟೆಲ್‌ಗೆ ಗ್ರಾಹಕರ ಸೇರ್ಪಡೆ; ವೊಡಾಫೋನ್ ಐಡಿಯಾಗೆ ಭಾರೀ ನಷ್ಟ

08:54 PM Nov 22, 2022 | Team Udayavani |

ನವದೆಹಲಿ: ದೂರಸಂಪರ್ಕ ನಿಯಂತ್ರಕ ಟ್ರಾಯ್ ಅಂಕಿ-ಅಂಶಗಳ ಪ್ರಕಾರ, ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ತಿಂಗಳಿಂದ ತಿಂಗಳಿಗೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿವೆ.

Advertisement

ಇನ್ನು ವೊಡಾಫೋನ್ ಐಡಿಯಾದ ಗ್ರಾಹಕರ ಸಂಖ್ಯೆಯ ಇಳಿಕೆ ಆಗುವುದರೊಂದಿಗೆ ಭಾರತದಲ್ಲಿ ಒಟ್ಟು ಚಂದಾದಾರರ ನೆಲೆಯು ಸೆಪ್ಟೆಂಬರ್‌ ತಿಂಗಳಲ್ಲಿ 3.6 ಮಿಲಿಯನ್ (36 ಲಕ್ಷ ಕುಸಿದಿದೆ). ಅಂದ ಹಾಗೆ ಜಿಯೋ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಭಾರ್ತಿ ಏರ್‌ಟೆಲ್ ತನ್ನ ಮೊಬೈಲ್ ಬಳಕೆದಾರರ ಸಂಖ್ಯೆಯನ್ನು 4.12 ಲಕ್ಷ ಹೆಚ್ಚಿಸಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಜಿಯೋ ನೇತೃತ್ವದಲ್ಲಿ ಉಳಿದ ಟೆಲಿಕಾಂ ಕಂಪನಿ ಚಂದಾದಾರನ್ನು ಸೇರ್ಪಡೆ ಮಾಡಿಕೊಂಡಿದ್ದರೂ ದೂರಸಂಪರ್ಕ ಕಂಪನಿಗಳ ನಿವ್ವಳ ಸೇರ್ಪಡೆಯು ಆಗಸ್ಟ್‌ನಲ್ಲಿ ಗಳಿಸಿದ 32.81 ಲಕ್ಷ ಚಂದಾದಾರರಿಗಿಂತ ಕಡಿಮೆಯಾಗಿದೆ. ಆರ್ಥಿಕ ಸಮಸ್ಯೆ ಸೇರಿದಂತೆ ನಾನಾ ಸಂಕಷ್ಟಗಳನ್ನು ಎದುರಿಸುತ್ತಿರುವ ವೊಡಾಫೋನ್ ಐಡಿಯಾದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಕುಸಿತ ಆಗಿದೆ. ಗ್ರಾಹಕ ನೆಲೆಯು 40 ಲಕ್ಷ ಕುಸಿದು, ಸೆಪ್ಟೆಂಬರ್‌ನಲ್ಲಿ 24.91 ಕೋಟಿಗೆ ತಲುಪಿದೆ.

“ಒಟ್ಟು ವೈರ್‌ಲೆಸ್ ಚಂದಾದಾರರು 2022ರ ಅಂತ್ಯದ ವೇಳೆಗೆ 1,149.11 ಮಿಲಿಯನ್‌ನಿಂದ 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 1,145.45 ಮಿಲಿಯನ್‌ಗೆ ಇಳಿದಿದ್ದು, ಇದರಿಂದಾಗಿ ಮಾಸಿಕ ಕುಸಿತದ ದರ ಶೇಕಡಾ 0.32ರಷ್ಟಿದೆ,” ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಚಂದಾದಾರಿಕೆಯ ಸೆಪ್ಟೆಂಬರ್ ಡೇಟಾ ಬಿಡುಗಡೆ ಮಾಡಿದೆ.

ಒಟ್ಟಾರೆಯಾಗಿ, ಭಾರತದಲ್ಲಿ ಟೆಲಿಫೋನ್ ಚಂದಾದಾರರ ಸಂಖ್ಯೆ (ಮೊಬೈಲ್ ಮತ್ತು ಸ್ಥಿರ-ಲೈನ್ ಒಟ್ಟಿಗೆ) 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 117.19 ಕೋಟಿಗೆ ಇಳಿದಿದ್ದು, ಇದು ಮಾಸಿಕ ಕುಸಿತ ದರ ಶೇ 0.27 ಎಂದಾಗುತ್ತದೆ. 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರು 81.6 ಕೋಟಿಗೆ ಏರಿದ್ದಾರೆ ಎಂದು ಟ್ರಾಯ್ (TRAI) ಹೇಳಿದ್ದು, ಮಾಸಿಕ ಬೆಳವಣಿಗೆ ದರ ಶೇ 0.28 ಆಗಿದೆ.

Advertisement

ಟಾಪ್ ಐದು ಸೇವಾ ಪೂರೈಕೆದಾರ ಸಂಸ್ಥೆಗಳು 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರಲ್ಲಿ ಶೇ 98.36ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. “ಈ ಸೇವಾ ಪೂರೈಕೆದಾರರು ರಿಲಯನ್ಸ್ ಜಿಯೋ ಇನ್ಫೋಕಾಮ್ (426.80 ಮಿಲಿಯನ್), ಭಾರ್ತಿ ಏರ್‌ಟೆಲ್ (225.09 ಮಿಲಿಯನ್), ವೊಡಾಫೋನ್ ಐಡಿಯಾ (123.20 ಮಿಲಿಯನ್), ಬಿಎಸ್‌ಎನ್‌ಎಲ್ (25.62 ಮಿಲಿಯನ್) ಮತ್ತು ಆಟ್ರಿಯಾ ಕನ್ವರ್ಜೆನ್ಸ್ (2.14 ಮಿಲಿಯನ್),” ಎಂದು ಟ್ರಾಯ್ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next