ಬೆಂಗಳೂರು: ಇ-ಮೇಲ್ ಹ್ಯಾಕ್ ಮಾಡಿ ಖಾಸಗಿ ವಿಡಿಯೋ ಕಳವು ಮಾಡಿ 2,200 ಯುಎಸ್ ಡಾಲರ್ ಬಿಟ್‌ಕಾಯಿನ್ ಮೂಲಕ ನೀಡುವಂತೆ ಬೆದರಿಕೆ ಹಾಕಿದ್ದ ಸೈಬರ್ ವಂಚಕರ ವಿರುದ್ಧ ಟೆಕ್ಕಿಯೊಬ್ಬರು ನಗರ ಪೊಲೀಸರಿಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ದೂರು ನೀಡಿದ್ದಾರೆ. ಘಟನೆ ಸಂಬಂಧ ಮುಂಬೈ ಮೂಲದ ಮಾರತ್ ಹಳ್ಳಿ ನಿವಾಸಿ ಮಹೇಶ್ ಶರ್ಮಾ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಹೇಶ್ ಶರ್ಮಾ, ಖಾಸಗಿ ಹಾಗೂ ಕಚೇರಿಯ ವ್ಯವಹಾರಕ್ಕಾಗಿ ಎರಡು ಇ-ಮೇಲ್‌ಗಳನ್ನು ಬಳಸುತ್ತಿದ್ದಾರೆ.
ಈ ಪೈಕಿ ಖಾಸಗಿ ಇ-ಮೇಲ್ ವಿಳಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಮಹೇಶ್ ಶರ್ಮಾರ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದು, 24 ಗಂಟೆಯೊಳಗೆ 2,200 ಯುಎಸ್ ಡಾಲರ್ ಅನ್ನು ಬಿಟಕಾಯಿನ್ ಮೂಲಕ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಹಣ ನೀಡದಿದ್ದರೆ ಈ ಖಾಸಗಿ ದೃಶ್ಯಗಳನ್ನು ಪೋರ್ನ್ ವೆಬ್‌ಸೈಟ್‌ಗೆ ಹಾಕುವುದಾಗಿ
ಬ್ಲ್ಯಾಕ್‌ವೆುàಲ್ ಮಾಡಿದ್ದಾನೆ. ಕೆಲ ಹೊತ್ತಿನ ಬಳಿಕ ಮತ್ತೂಂದು ಸಂದೇಶ ಕಳುಹಿಸಿದ ದುಷ್ಕರ್ಮಿ ಪೊಲೀಸರ ಮೊರೆ ಹೋದರೆ, ಈ ವಿಡಿಯೋ ಮತ್ತು ಫೋಟೋಗಳನ್ನು ಇ-ಮೇಲ್ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿಯೂ ಬೆದರಿಸಿದ್ದಾನೆ
ಪೊಲೀಸರಿಗೆ ಟ್ಯಾಗ್
ಆರೋಪಿಯ ಬ್ಲ್ಯಾಕ್‌ಮೇಲ್‌ಗೆ ಆತಂಕಗೊಂಡ ಮಹೇಶ್ ಶರ್ಮಾ ಸ್ವತಃ ತಾವೇ ತನಿಖೆಗೆ ಇಳಿದು, ಆರೋಪಿಯ ಪತ್ತೆಗೆ
ಮುಂದಾಗಿದ್ದರು.ಈ ವೇಳೆ ತಮ್ಮ ಇ-ಮೇಲ್ ಮತ್ತು ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಿ ಅದರಲ್ಲಿದ್ದ ಖಾಸಗಿ ವಿಡಿಯೋವನ್ನು ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಅಪರಿಚಿತನ ಬೇಡಿಕೆಗೆ ನಿರಾಕರಿಸಿದಾಗ ಕೆಲ ಪೋರ್ನ್ ವೆಬ್‌ಸೈಟ್‌ಗೆ ಈ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಘಟನೆಯನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಮಹೇಶ್ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಆರೋಪಿ ಪತ್ತೆಗೆ ಮನವಿ ಮಾಡಿದ್ದಾರೆ.