Advertisement
ಸೆ. 17ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ನಡೆದ ತೀಯಾ ಸಮಾಜ ಮುಂಬಯಿ ಇದರ 73ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಕುಲದೇವತೆ ಭಗವತೀ ಮಾತೆ ಮತ್ತು ಕುಲಗುರು ಬ್ರಹ್ಮಶ್ರೀ ಗುರು ನಾರಾಯಣರಿಗೆ ಪ್ರಾರ್ಥನೆಗೈದು ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಸಂಬಂಧಿಕರು, ತೀಯಾ ಬಂಧುಗಳೇ ಆಗಿದ್ದು, ನಮ್ಮಲ್ಲಿ ತಾರತಮ್ಯ, ಭೇದ-ಭಾವ ಸಲ್ಲದು. ಚಿಕ್ಕಪುಟ್ಟ ಕಾರಣಗಳನ್ನೆತ್ತಿ ಸಮಾಜದಲ್ಲಿ ವದಂತಿ ಸೃಷ್ಟಿಸುವುದು ಸರಿಯಲ್ಲ. ನಾವೆಲ್ಲರೂ ಬಾಂಧವರೇ ಆಗಿ ಮುನ್ನಡೆಯುವ ಅಗತ್ಯವಿದೆ. ಇದನ್ನೇ ನಮ್ಮ ಪೀಳಿಗೆ ಪರಿಪಾಲಿಸುವಂತೆ ಆಗಬೇಕು. ಏಕತೆಗಾಗಿ ದೋಷಾರೋಪ, ಸ್ಪರ್ಧೆ ಸರಿಯಲ್ಲ. ಬದಲಾಗಿ ಸೌಮ್ಯತೆ, ಬದ್ಧತೆಯಿಂದ ಸಮಾಜವನ್ನು ಬಲಪಡಿಸೋಣ ಎಂದರು.
ಮಹಿಳಾ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. ಗೌರವ ಕೋಶಾಧಿ ಕಾರಿ ರಮೇಶ್ ಎನ್. ಉಳ್ಳಾಲ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಮುಂದಿನ ಸಾಲಿನ ಬಜೆಟ್ ಮಂಡಿಸಿದರು. ಬಳಿಕ ತೀಯಾ ಬೆಳಕು ಸಂಪಾದಕರನ್ನಾಗಿ ಶ್ರೀಧರ್ ಎಸ್.ಸುವರ್ಣ ಅವರನ್ನು ಪುನರಾಯ್ಕೆಗೊಳಿಸ ಲಾಯಿತು. 2017-2018ರ ಅವಧಿಗೆ 8 ನೂತನ ಸದಸ್ಯರನ್ನು ಮತ್ತು ಸಭೆಯು ಆಯ್ಕೆ ಗೊಳಿಸಿತು. ಸಭಿಕರಲ್ಲಿನ ಸಾಗರ್ ಕಟೀಲ್, ಗಾಯತ್ರಿ ಮಂಜೇಶ್ವರ್, ಗೋಪಾಲ್ ಸಾಲ್ಯಾನ್, ಬಾಬು ಕೆ.ಬೆಳ್ಚಡ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ್ ಎಂ. ಐಲ್ ಸ್ವಾಗತಿಸಿ ಗತ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿ ವಂದಿಸಿದರು. ಸಭೆಯಲ್ಲಿ ವಿಶ್ವಸ್ತ ಸದಸ್ಯರಾದ ಅಪ್ಪುಂÿ ಕೆ. ಬಂಗೇರ, ಜಯ ಸಿ.ಸಾಲ್ಯಾನ್, ಸಂಸ್ಥೆಯ ಜೊತೆ ಕಾರ್ಯದರ್ಶಿ ಗಳಾದ ನ್ಯಾಯವಾದಿ ನಾರಾಯಣ ಬಿ. ಸುವರ್ಣ, ನ್ಯಾಯವಾದಿ ಬಿ. ಕೆ. ಸದಾಶಿವ್, ಜೊತೆ ಕೋಶಾಧಿಕಾರಿ ಕೆ. ಬಿ. ಚಂದ್ರಶೇಖರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರ್ಷದ್ ಸಿ. ಕರ್ಕೇರ, ಸುಂದರ್ ಬಿ. ಐಲ್, ಸುರೇಶ್ ಬಂಗೇರ, ನಾರಾಯಣ ಸಾಲ್ಯಾನ್, ಪುರಂದರ್ ಸಾಲ್ಯಾನ್, ಶಶಿಧರ್ ಬಿ. ಎಂ. ಸೇರಿದಂತೆ ಮುಂದಾಳುಗಳಾದ ರವೀಂದ್ರ ಎಸ್. ಮಂಜೇಶ್ವರ್, ಶಂಕರ್ ಸಿ. ಸಾಲ್ಯಾನ್, ತಿಮ್ಮಪ್ಪ ಕೆ. ಬಂಗೇರ, ಉಜ್ವಲಾ ಚಂದ್ರಶೇಖರ್, ವೃಂದಾ ದಿನೇಶ್, ಸುಜಾತಾ ಎಸ್. ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಮಧ್ಯಾಂತರದಲ್ಲಿ ಪದಾಧಿಕಾರಿಗಳು ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಅನನ್ಯ ಸೇವೆ ಸಲ್ಲಿಸಿದ ದಿವ್ಯಾ ಆರ್. ಕೋಟ್ಯಾನ್ ಮತ್ತು ರಾಮಚಂದ್ರ ಕೋಟ್ಯಾನ್ ದಂಪತಿಯನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಸತ್ಕರಿಸಿ ಗೌರವಿಸಿದರು. ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.