Advertisement

ಹೊಸ ವರ್ಷಕ್ಕೆ ತೆರೆಮೇಲೆ ಬರಲಿದೆ  ದೃಷ್ಯಂ-2

08:07 PM Dec 23, 2020 | Adarsha |

ಮುಂಬೈ: ಕೆಲ ವರ್ಷಗಳ ಹಿಂದೆ ಮಲೆಯಾಳಂ ಭಾಷೆಯಲ್ಲಿ ತೆರೆಕಂಡಿದ್ದ ದೃಷ್ಯಂ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾದ ಮುಂದುವರೆದ ಭಾಗವಾದ ದೃಷ್ಯಂ 2 ತೆರೆಮೇಲೆ ಬರಲು ರೆಡಿಯಾಗಿದೆ.

Advertisement

2013ರಲ್ಲಿ ಬಿಡುಗಡೆಯಾದ ದೃಷ್ಯಂ  ಸಿನಿಮಾ ಖ್ಯಾತ ನಿರ್ದೇಶಕ ಜೀತು ಜೋಸೆಫ್ ಆ್ಯಕ್ಷನ್ ಕಟ್ ನಲ್ಲಿ ಮೂಡಿಬಂದ ಈ ಸಿನಿಮಾ, ಸಿನಿ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಬರೆಯುವ ಮೂಲಕ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ರೀಮೆಕ್ ಆಗಿತ್ತು.

ಇದೀಗ ದೃಷ್ಯಂ ಸಿನಿಮಾದ ಮುಂದುವರೆದ ಭಾಗವಾದ ದೃಷ್ಯಂ-2 ಕುರಿತಂತೆ ಹೊಸ ಅಪ್ ಡೇಟ್ ಸಿಕ್ಕಿದ್ದು, ಸಿನಿಮಾ ಮುಂಬರುವ 2021ರ ಜನವರಿಯಲ್ಲಿ ಬಿಡುಗಡೆಗೊಳ್ಳದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಕ್ರಿಸ್‌ಮಸ್‌, ಹೊಸವರ್ಷ ಸರಳವಾಗಿ ಆಚರಿಸಿ

ಈ ನಡುವೆ ಚಿತ್ರದ ಟೀಸರ್  ಅನ್ನು ಡಿಸೆಂಬರ್ 31 ರಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ದರಿಸಿದ್ದು, ಈ ಕುರಿತಂತೆ ನಟ ಮೋಹನ್ ಲಾಲ್ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ಈ ಸಿನಿಮಾವು ದೃಷ್ಯಂ ಸಿನಿಮಾದ ಮುಂದುವರೆದ ಭಾಗವಾಗಿರಲಿದ್ದು, ದೃಷ್ಯಂ ಸಿನಿಮಾದಲ್ಲಿ ನಟಿಸಿರುವ ನಟ ಮೋಹನ್ ಲಾಲ್, ಮೀನಾ ,ಸನ್ಸಿಬಾ ಹಾಸನ್ ಮುಂತಾವದರು ಇಲ್ಲಿಯೂ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಹಿಂದಿನ ಸಿನಿಮಾ ಚಿತ್ರೀಕರಣ ನಡೆದ ಸ್ಥಳದಲ್ಲಿಯೇ ಈ ಸಿನಿಮಾವನ್ನೂ ಚಿತ್ರೀಕರಿಸಲಾಗಿದೆ  ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಅಲ್ಲಮ ಕುರಿತು ಮತ್ತೂಂದು ಚಿತ್ರ

Advertisement

Udayavani is now on Telegram. Click here to join our channel and stay updated with the latest news.

Next