Advertisement

ಸುಳ್ಳು ಸುದ್ದಿ ಪತ್ತೆಗೆ ತಂಡ

05:33 AM Oct 07, 2018 | |

ಹೊಸದಿಲ್ಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಿಗೂ ಮುನ್ನ ಫೇಸ್‌ಬುಕ್‌ ಸುಳ್ಳು ಸುದ್ದಿ ಹಾಗೂ ನಿಜ ಸುದ್ದಿಗಳನ್ನು ಪತ್ತೆ ಮಾಡುವುದಕ್ಕಾಗಿ ಬೃಹತ್‌ ಕಾರ್ಯಪಡೆಯೊಂದನ್ನು ರಚಿಸಿದೆ. ಈ ತಂಡದಲ್ಲಿ ಭದ್ರತಾ ಪರಿಣತರು ಹಾಗೂ ಕಂಟೆಂಟ್‌ ಪರಿಣತರೂ ಇರಲಿದ್ದಾರೆ. ಇವರು ಫೇಸ್‌ಬುಕ್‌ ಅನ್ನು ದುಷ್ಕೃತ್ಯಗಳಿಗೆ ಬಳಸಿ ಕೊಳ್ಳುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ನೀತಿ ನಿಯಮಗಳ ವಿಭಾಗದ ಉಪ ಮುಖ್ಯಸ್ಥ ರಿಚರ್ಡ್‌ ಅಲನ್‌ ಹೇಳಿದ್ದಾರೆ.

Advertisement

ಇದಕ್ಕೆ ಪೂರ್ವಭಾವಿಯಾಗಿ ಹೊಸದಿಲ್ಲಿ ಯಲ್ಲಿ ನಡೆಸಿದ ಸಮುದಾಯ ನಿಯಮಗಳು ಎಂಬ ಶೀರ್ಷಿಕೆಯ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿದ್ದಾರೆ. ನೈಜ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ಒಂದು ತಂಡ ನಿರ್ವಹಿಸಲಿದ್ದರೆ, ಇತರ ಸುಳ್ಳು ಮಾಹಿತಿ ಗಳನ್ನು ಇನ್ನೊಂದು ತಂಡ ಪರಿಶೀಲನೆ ನಡೆಸಿ, ಇದರಲ್ಲಿನ ವಿವರಗಳು ವಾಸ್ತವವೇ ಅಥವಾ ಸುಳ್ಳೇ ಎಂದು ನೋಡಲಿದೆ.

ಈ ತಂಡವು ಭಾರತದಲ್ಲೇ ಇರುತ್ತದೆ. ರಾಜಕೀಯ ಸುದ್ದಿಗಳಲ್ಲಿ ಯಾವುದು ವಾಸ್ತವ ಮತ್ತು ಯಾವುದು ದುರುದ್ದೇಶಪೂರಿತ ಎಂಬುದನ್ನು ಗುರುತಿಸುವುದೇ ಈ ತಂಡಕ್ಕೆ ಸವಾಲಿನ ಕೆಲಸ ಎಂದು ಅಲನ್‌ ಹೇಳಿದ್ದಾರೆ. ಅಮೆರಿಕ ಚುನಾವಣೆಯ ವೇಳೆ ಚುನಾವಣೆ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್‌ ಅನಾಲಿಟಿಕಾ, ಫೇಸ್‌ಬುಕ್‌ ಡೇಟಾ ಬಳಸಿಕೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿ ಭಾರತದ ಚುನಾವಣೆಯ ವೇಳೆ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next