Advertisement

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

10:22 AM Dec 06, 2021 | Team Udayavani |

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದ ಟೀಂ ಇಂಡಿಯಾ ನಾಲ್ಕನೇ ದಿನದ ಆರಂಭದಲ್ಲೇ ಪಂದ್ಯ ಮುಗಿಸಿದೆ. 372 ರನ್ ಅಂತರದಿಂದ ಪಂದ್ಯ ಜಯಿಸಿದ ಭಾರತ ತಂಡ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

Advertisement

ಗೆಲ್ಲಲು 540 ರನ್ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ಮೂರನೇ ದಿನದಾಟದ ಅಂತ್ಯದಲ್ಲಿ ಐದು ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಒಂದೆಡೆ ಹೆನ್ರಿ ನಿಕೋಲ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ ಮತ್ತೊಂದೆಡೆ ಸತತ ವಿಕೆಟ್ ಗಳು ಉರುಳಿತು.

ಇದನ್ನೂ ಓದಿ:ಇಂದು ಬಾಂಗ್ಲಾದೇಶ – ಭಾರತ “ಮೈತ್ರಿ ದಿನ’

ಸ್ಪಿನ್ ದಾಳಿ ದಾಳಿ ನಡೆಸಿದ ಜಯಂತ್ ಯಾದವ್ ಇಂದು ನಾಲ್ಕು ವಿಕೆಟ್ ಕಿತ್ತರು. ಕೊನೆಯ ವಿಕೆಟ್ ಅಶ್ವಿನ್ ಪಾಲಾಯಿತು. ನ್ಯೂಜಿಲ್ಯಾಂಡ್ ತಂಡ 167 ರನ್ ಗೆ ಆಲೌಟಾಯಿತು.

ಕಿವೀಸ್ ಪರ ಡ್ಯಾರೆಲ್ ಮಿಚೆಲ್ 60 ರನ್ ಗಳಿಸಿದರೆ, ನಿಕೋಲ್ಸ್ 44 ರನ್ ಗಳಿಸಿದರು. ಉಳಿದ ಯಾರಿದಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಭಾರತದ ಪರ ಜಯಂತ್ ಯಾದವ್ ಮತ್ತು ಅಶ್ವಿನ್ ತಲಾ ನಾಲ್ಕು ವಿಕೆಟ್ ಕಿತ್ತರೆ, ಒಂದು ವಿಕೆಟ್ ಅಕ್ಷರ್ ಪಟೇಲ್ ಪಡೆದರು.

Advertisement

ಸಂಕ್ಷಿಪ್ತ ಸ್ಕೋರ್:

ಭಾರತ: 325 ಮತ್ತು 276-7

ನ್ಯೂಜಿಲ್ಯಾಂಡ್: 62 ಮತ್ತು 167

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next