ಅಹ್ಮದಾಬಾದ್: ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟಿಗರು ಹೋಳಿಯ ರಂಗಿನಲ್ಲಿ ಮಿಂದೆದ್ದರು. ಈ ಬಣ್ಣದ ಪರ್ವವನ್ನು ಅವರು ತಂಡದ ಬಸ್ಸಿನಲ್ಲೇ ಆಚರಿಸಿದ್ದು ವಿಶೇಷವಾಗಿತ್ತು.
ಇದರ ವೀಡಿಯೋ ಒಂದನ್ನು ಶುಭಮನ್ ಗಿಲ್ ಹಂಚಿಕೊಂಡಿದ್ದಾರೆ. ಬಣ್ಣ ಮೆತ್ತಿಸಿಕೊಂಡಿದ್ದ ಕ್ರಿಕೆಟಿಗರೆಲ್ಲ ಹಾಡುತ್ತ, ಕುಣಿಯುತ್ತ, ನಡುನಡುವೆ ಫೋಟೊ ತೆಗೆಯುತ್ತ ಸಂಭ್ರಮಿಸುತ್ತಿದ್ದ ದೃಶ್ಯವನ್ನು ಇದರಲ್ಲಿ ಕಾಣಬಹುದಿತ್ತು.
ನಾಯಕ ರೋಹಿತ್ ಶರ್ಮ, ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದ ಸದಸ್ಯರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ದೃಶ್ಯವೂ ಇತ್ತು. ಶುಭಮನ್ ಗಿಲ್ ಈ ವೀಡಿಯೋಗೆ ಹಿನ್ನೆಲೆಯಾಗಿ “ರಂಗ್ ಬರ್ಸೆ…’ ಹಾಡನ್ನು ಅಳವಡಿಸಿದ್ದಾರೆ.