Advertisement

ಟೀಮ್‌ ಇಂಡಿಯಾ ನ್ಯೂಜಿಲ್ಯಾಂಡ್‌ ಪ್ರವಾಸ; ಹಾರ್ದಿಕ್‌ ಪಾಂಡ್ಯ ಯುಗಕ್ಕೆ ಮುನ್ನುಡಿ? 

02:33 PM Nov 15, 2022 | Team Udayavani |

ವೆಲ್ಲಿಂಗ್ಟನ್‌: ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತು ಹೊರಬಿದ್ದ ಬಳಿಕ ಭಾರತದ ಅಭಿಮಾನಿಗಳದು ಒಂದೇ ಕೂಗು… ಚುಟುಕು ಮಾದರಿಯ ಕ್ರಿಕೆಟ್‌ನಿಂದ ಸೀನಿಯರ್‌ಗಳನ್ನೆಲ್ಲ ಕೈಬಿಟ್ಟು ಯುವ ಪಡೆಯೊಂದನ್ನು ರೂಪಿಸಿ ಇವರನ್ನು 2024ರ ವಿಶ್ವಕಪ್‌ಗೆ ಸಜ್ಜುಗೊಳಿಸಬೇಕೆನ್ನುವುದು. ಇದಕ್ಕೆ ಈಗಲೇ ಕಾಲ ಸನ್ನಿಹಿತವಾಗಿದೆಯೇ? “ಹೌದು’ ಎನ್ನುತ್ತದೆ ಮುಂಬರುವ ನ್ಯೂಜಿಲ್ಯಾಂಡ್‌ ಪ್ರವಾಸಕ್ಕೆ ಅಣಿಯಾಗಿರುವ ತಂಡ.

Advertisement

ಇಲ್ಲಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ದಿನೇಶ್‌ ಕಾರ್ತಿಕ್‌, ಆರ್‌. ಅಶ್ವಿ‌ನ್‌, ಮೊಹಮ್ಮದ್‌ ಶಮಿ ಮೊದಲಾದ ಸೀನಿಯರ್‌ಗಳಿಲ್ಲ. ಐಪಿಎಲ್‌ನ ಮೊದಲ ಪ್ರವೇಶದಲ್ಲೇ ಗುಜರಾತ್‌ ಟೈಟಾನ್ಸ್‌ ತಂಡವನ್ನು ಚಾಂಪಿ ಯನ್‌ ಪಟ್ಟಕ್ಕೇರಿಸಿದ ಹಾರ್ದಿಕ್‌ ಪಾಂಡ್ಯ ನ್ಯೂಜಿಲ್ಯಾಂಡ್‌ನ‌ಲ್ಲಿ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ. ಸೀನಿಯರ್‌ಗಳನ್ನೆಲ್ಲ ಶಾಶ್ವತವಾಗಿ ಹೊರಗಿರಿಸಿ ಪಾಂಡ್ಯ ಮತ್ತು ಯುವ ತಂಡವನ್ನೇ ಮುಂದುವರಿಸುವುದು ಭಾರತದ ಮುಂದಿನ ಯೋಜನೆ ಆಗಿದ್ದರೆ ಅಚ್ಚರಿಯೇನಿಲ್ಲ.

ಟಿ20ಗೆ ನೂತನ ದಿಶೆ
ನ್ಯೂಜಿಲ್ಯಾಂಡ್‌ ಪ್ರವಾಸದಲ್ಲಿ ಭಾರತ 3 ಟಿ20 ಪಂದ್ಯಗಳ ನ್ನಾಡ ಲಿದೆ. ಶುಕ್ರವಾರವೇ ಮೊದಲ ಮುಖಾಮುಖಿ. ಇಲ್ಲಿ ಪಾಂಡ್ಯ ಪಡೆ ಮೇಲುಗೈ ಸಾಧಿಸಿದರೆ ರೋಹಿತ್‌ ಶರ್ಮ ಖಾಯಂ ಆಗಿ ಹೊರಗುಳಿಯುವುದರಲ್ಲಿ ಅನುಮಾನವಿಲ್ಲ.

ಆಗ ಶುಭಮನ್‌ ಗಿಲ್‌, ಇಶಾನ್‌ ಕಿಶನ್‌, ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ರಜತ್‌ ಪಾಟೀದಾರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಉಮ್ರಾನ್‌ ಮಲಿಕ್‌, ಹರ್ಷಲ್‌ ಪಟೇಲ್‌, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಮೊಹಮ್ಮದ್‌ ಸಿರಾಜ್‌ ಮೊದಲಾದವರು ಭಾರತದ ಟಿ20 ಕ್ರಿಕೆಟಿಗೆ ನೂತನ ದಿಶೆಯೊಂದನ್ನು ಕಲ್ಪಿಸುವ ಬಲವಾದ ನಿರೀಕ್ಷೆ ಇದೆ.

ಇವರಷ್ಟೇ ಅಲ್ಲ… ದೀಪಕ್‌ ಚಹರ್‌, ಶಾದೂìಲ್‌ ಠಾಕೂರ್‌, ಶ್ರೇಯಸ್‌ ಅಯ್ಯರ್‌, ಕುಲದೀಪ್‌ ಸೇನ್‌, ಅರ್ಷದೀಪ್‌ ಸಿಂಗ್‌ ಅವರನ್ನೂ ಟಿ20 ದೃಷ್ಟಿಕೋನದಲ್ಲೇ ಪರಿಗಣಿಸಬೇಕಿದೆ. ಹಾಗೆಯೇ ಮುಂದಿನೆರಡು ಐಪಿಎಲ್‌ ಸರಣಿಗಳಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮುವ ಸಾಧ್ಯತೆ ಇದೆ. ಇವರನ್ನೂ ವಿಶ್ವಕಪ್‌ಗೆ ಅಣಿಗೊಳಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ.

Advertisement

ಪ್ರತ್ಯೇಕ ತಂಡ ಬೇಕು
ಅನಿಲ್‌ ಕುಂಬ್ಳೆ ಸೇರಿದಂತೆ ಭಾರತದ ಬಹುತೇಕ ಮಾಜಿಗಳು “ಸ್ಪ್ಲಿಟ್‌ ಟೀಮ್‌’ ಬಗ್ಗೆ ಆಸಕ್ತಿ ತೋರಿದ್ದಾರೆ. ಇಂಗ್ಲೆಂಡ್‌, ಆಸ್ಟ್ರೇಲಿಯದಂತೆ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸುವ ಕುರಿತು ಈಗಾಗಲೇ ಸಲಹೆ ನೀಡಿದ್ದಾರೆ. ಹಾಗೆಯೇ ಬೇರೆ ಬೇರೆ ದೇಶಗಳಲ್ಲಿ ನಡೆಯುವ ಟಿ20 ಲೀಗ್‌ಗಳಲ್ಲಿ ನಮ್ಮ ಯುವ ಆಟಗಾರಿಗೂ ಅವಕಾಶ ಕಲ್ಪಿಸಲು ಮಂಡಳಿ ಮುಂದಾಗಬೇಕು ಎಂಬ ಸಲಹೆಯನ್ನೂ ಮಂಡಿಸಲಾಗಿದೆ. ನಮ್ಮ ಐಪಿಎಲ್‌ ಉಳಿದವರ ಯಶಸ್ಸಿಗೆ ಕಾರಣವಾಗಬಹುದಾದರೆ, ಉಳಿದ ದೇಶಗಳ ಕ್ರಿಕೆಟ್‌ ಲೀಗ್‌ ನಮ್ಮವರಿಗೂ ಯಶಸ್ಸು ತಂದಿಕೊಡಬಹುದಲ್ಲವೇ?

ನ್ಯೂಜಿಲ್ಯಾಂಡ್‌ ಸರಣಿಯ ಫ‌ಲಿತಾಂಶ ಭಾರತೀಯ ಟಿ20 ಭವಿಷ್ಯಕ್ಕೊಂದು ದಿಕ್ಸೂಚಿ ಆಗ ಬಹುದು ಎಂಬುದೊಂದು ನಿರೀಕ್ಷೆ. ಪಾಂಡ್ಯ ಯುಗ ಇಲ್ಲಿಂದಲೇ ಆರಂಭವಾದರೆ 2024ರ ವಿಶ್ವಕಪ್‌ಗೆ ಸಿದ್ಧತೆ ಆರಂಭಗೊಂಡಂತೆ!

ಸರಣಿ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ
ನ. 18 ಮೊದಲ ಟಿ20 ವೆಲ್ಲಿಂಗ್ಟನ್‌ ಅ. 12.00
ನ. 20 2ನೇ ಟಿ20 ಮೌಂಟ್‌ ಮೌಂಗನಿ ಅ. 12.00
ನ. 22 3ನೇ ಟಿ20 ನೇಪಿಯರ್‌ ಅ. 12.00
ನ. 25 ಮೊದಲ ಏಕದಿನ ಆಕ್ಲೆಂಡ್‌ ಬೆ. 7.00
ನ. 27 2ನೇ ಏಕದಿನ ಹ್ಯಾಮಿಲ್ಟನ್‌ ಬೆ. 7.00
ನ. 30 3ನೇ ಏಕದಿನ ಕ್ರೈಸ್ಟ್‌ಚರ್ಚ್‌ ಬೆ. 7.00

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next