Advertisement
ಬುಧವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆದ 10ನೇ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವ ಸ್ವೀಕರಿಸಿದ ಬಳಿಕ ಯುವಿ ಇಂಥದೊಂದು ಅಭಿಪ್ರಾಯಪಟ್ಟಿದ್ದಾರೆ. ಈ ಪಂದ್ಯ ವನ್ನು ವಾರ್ನರ್ ಪಡೆ 35 ರನ್ನುಗಳಿಂದ ಜಯಿಸಿತು.
Related Articles
Advertisement
23 ಎಸೆತಗಳಲ್ಲಿ 50 ರನ್: ಉದ್ಘಾಟನಾ ಪಂದ್ಯ ದಲ್ಲಿ ಯುವರಾಜ್ ಕೇವಲ 27 ಎಸೆತಗಳಲ್ಲಿ, 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ದರು. ಇದರಿಂದಾಗಿ ಚಾಂಪಿಯನ್ ಹೈದರಾಬಾದ್ ತಂಡದ ಮೊತ್ತ ನಾಲ್ಕೇ ವಿಕೆಟಿಗೆ 207ರ ತನಕ ಬೆಳೆಯಿತು. ಯುವಿ ಅರ್ಧ ಶತಕ ಬರೀ 23 ಎಸೆತಗಳಿಂದ ಬಂತು. ಇದು ಐಪಿಎಲ್‌ನಲ್ಲಿ ಅವರ ಅತೀ ವೇಗದ ಅರ್ಧ ಶತಕ. ಹಿಂದೆ 2 ಸಲ 24 ಎಸೆತಗಳಿಂದ 50 ರನ್ ಪೂರ್ತಿಗೊಳಿಸಿದ್ದರು.
ಜವಾಬು ನೀಡಿದ ಆರ್‌ಸಿಬಿ 19.4 ಓವರ್‌ಗಳಲ್ಲಿ 172 ರನ್ನಿಗೆ ಆಲೌಟ್ ಆಯಿತು. ಬೆಂಗಳೂರು ಪರ 21 ಎಸೆತಗಳಿಂದ 32 ರನ್ ಹೊಡೆದ ಕಿ8Åಸ್ ಗೇಲ್ ಅವರದೇ ಸರ್ವಾಧಿಕ ಗಳಿಕೆ. ಕೇದಾರ್ ಜಾಧವ್ 31, ಟ್ರ್ಯಾವಿಸ್ ಹೆಡ್ 30, ಮನ್‌ದೀಪ್ ಸಿಂಗ್ 24, ಉಸ್ತುವಾರಿ ನಾಯಕ ಶೇನ್ ವಾಟ್ಸನ್ 22 ರನ್ ಹೊಡೆದರು. ಕೊನೆಯ 5 ವಿಕೆಟ್‌ಗಳು 2.5 ಓವರ್‌ಗಳಲ್ಲಿ, ಕೇವಲ 18 ರನ್ ಅಂತರದಲ್ಲಿ ಉದುರಿ ಹೋದವು.
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಆಶಿಷ್ ನೆಹ್ರಾ ಮತ್ತು ರಶೀದ್ ಖಾನ್ ತಲಾ 2 ವಿಕೆಟ್ ಹಾರಿಸಿದರು. ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ ಹೈದರಾಬಾದ್ 4 ವಿಕೆಟಿಗೆ 207; ರಾಯಲ್ ಚಾಲೆಂಜರ್ ಬೆಂಗಳೂರು 19.4 ಓವರ್‌ಗಳಲ್ಲಿ ಆಲೌಟ್ (ಕ್ರಿಸ್ ಗೇಲ್ 32, ಮನ್‌ದೀಪ್ ಸಿಂಗ್ 24, ಟ್ರ್ಯಾವಿಸ್ ಹೆಡ್ 30, ಕೇದಾರ್ ಜಾಧವ್ 31, ಶೇನ್ ವಾಟ್ಸನ್ 22, ಆಶಿಷ್ ನೆಹ್ರ 42ಕ್ಕೆ 2, ಭುವನೇಶ್ವರ್ ಕುಮಾರ್ 27ಕ್ಕೆ 2, ರಶೀದ್ ಖಾನ್ 30ಕ್ಕೆ 2). ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್. ಎಕ್ಸ್‌ಟ್ರಾ ಇನ್ನಿಂಗ್ಸ್
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಪಂದ್ಯದಲ್ಲಿ ಇಬ್ಬರು ವಿದೇಶಿ ನಾಯಕರು ಕಾಣಿಸಿಕೊಂಡರು (ವಾರ್ನರ್, ವಾಟ್ಸನ್). ರಶೀದ್ ಖಾನ್ ಐಪಿಎಲ್ ಆಡಿದ ಅಸೋಸಿಯೇಟ್ ರಾಷ್ಟ್ರದ 3ನೇ ಕ್ರಿಕೆಟಿಗನೆನಿಸಿದರು. ಇದಕ್ಕೂ ಮುನ್ನ ಹಾಲೆಂಡಿನ ರಿಯಾನ್ ಟೆನ್ ಡೊಶೆಟ್ ಮತ್ತು ಕೀನ್ಯಾದ ತನ್ಮಯ್ ಮಿಶ್ರಾ ಕೆಕೆಆರ್ ಹಾಗೂ ಡೆಲ್ಲಿ ಪರ ಆಡಿದ್ದರು. ಆಶಿಷ್ ನೆಹ್ರಾ ಐಪಿಎಲ್‌ನಲ್ಲಿ 100 ವಿಕೆಟ್ ಕಿತ್ತ 8ನೇ ಬೌಲರ್, 4ನೇ ಪೇಸ್ ಬೌಲರ್ ಹಾಗೂ ಮೊದಲ ಎಡಗೈ ಬೌಲರ್ ಆಗಿ ಮೂಡಿಬಂದರು. ಡೇವಿಡ್ ವಾರ್ನರ್ ಟಿ-20 ಕ್ರಿಕೆಟ್‌ನಲ್ಲಿ 100 ಕ್ಯಾಚ್ ಪಡೆದ 15ನೇ ಫೀಲ್ಡರ್ ಎನಿಸಿದರು. ಹೈದರಾಬಾದ್‌ನಲ್ಲಿ 7ನೇ ಸಲ ತಂಡವೊಂದು ಇನ್ನೂರಕ್ಕೂ ಹೆಚ್ಚು ಮೊತ್ತ ಪೇರಿಸಿತು. ಇದರಲ್ಲಿ 2 ಸಲವಷ್ಟೇ ಯಶಸ್ವಿ ಚೇಸಿಂಗ್ ಸಾಧ್ಯವಾಗಿದೆ. 2008ರ ಡೆಕ್ಕನ್ ಚಾರ್ಜರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 215 ರನ್ ಚೇಸ್ ಮಾಡಿ ಗೆದ್ದದ್ದು ದಾಖಲೆ. ಯುವರಾಜ್ ಸಿಂಗ್ ಐಪಿಎಲ್‌ನಲ್ಲಿ ತಮ್ಮ ಅತೀ ವೇಗದ ಅರ್ಧ ಶತಕ ಬಾರಿಸಿದರು (23 ಎಸೆತ). ಇದಕ್ಕೂ ಮುನ್ನ ಅವರು 2 ಸಲ ಆರ್‌ಸಿಬಿ ವಿರುದ್ಧವೇ 24 ಎಸೆತಗಳಲ್ಲಿ 50 ರನ್ ಹೊಡೆದದ್ದು ದಾಖಲೆಯಾಗಿತ್ತು. ಶೇನ್ ವಾಟ್ಸನ್ ಹೈದರಾಬಾದ್ ವಿರುದ್ಧ ಸತತ 2 ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿ ಎನಿಸಿದರು (ಕಳೆದ ವರ್ಷದ ಫೈನಲ್‌ನ ಕೊನೆಯ ಓವರ್ ಹಾಗೂ ಈ ಐಪಿಎಲ್‌ನ ಮೊದಲ ಓವರ್). ಡೇವಿಡ್ ವಾರ್ನರ್ ಸನ್‌ರೈಸರ್ ಹೈದರಾಬಾದ್ ಪರ ಆರ್‌ಸಿಬಿ ವಿರುದ್ಧ ಮೊದಲ ಬಾರಿಗೆ ಅರ್ಧ ಶತಕ ಬಾರಿಸುವಲ್ಲಿ ವಿಫಲರಾದರು. ಇದಕ್ಕೂ ಹಿಂದಿನ ಎಲ್ಲ 7 ಪಂದ್ಯಗಳಲ್ಲೂ ಅವರು ಫಿಫ್ಟಿ ಹೊಡೆದಿದ್ದರು. 2014ರ ಬಳಿಕ ಹೈದರಾಬಾದ್‌ನಲ್ಲಿ ನಡೆದ 16 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಕ್ಕೆ 4ನೇ ಗೆಲುವು ಒಲಿಯಿತು. ಆರ್‌ಸಿಬಿ ವಿರುದ್ಧ ಆಡಿದ 10 ಪಂದ್ಯಗಳಲ್ಲಿ ಹೈದರಾಬಾದ್ 6ನೇ ಗೆಲುವು ಸಾಧಿಸಿತು. ಅನಿಕೇತ್ ಚೌಧರಿ ಐಪಿಎಲ್ ಪಾದಾರ್ಪಣಾ ಪಂದ್ಯದಲ್ಲೇ 3ನೇ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿದರು (55). ಮೈಕಲ್ ನೆಸರ್ 62 ರನ್ ನೀಡಿದ್ದು ದಾಖಲೆ. ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿಯುವ ಮುನ್ನ ಸತತ 68 ಪಂದ್ಯಗಳಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ಈ ಸಾಧನೆಯಲ್ಲಿ ಅವರಿಗೆ ದ್ವಿತೀಯ ಸ್ಥಾನ. ಗಂಭೀರ್ ಸತತ 91 ಪಂದ್ಯಗಳಲ್ಲಿ ಕೆಕೆಆರ್ ನಾಯಕನಾಗಿ ಕಾಣಿಸಿಕೊಂಡದ್ದು ದಾಖಲೆ. ಕೊಹ್ಲಿ ಆರ್‌ಸಿಬಿ ಪರ ಸತತ 144 ಪಂದ್ಯಗಳನ್ನಾಡಿದ ಬಳಿಕ ಮೊದಲ ಸಲ ಹೊರಗುಳಿದರು. ಈ ಯಾದಿಯಲ್ಲೂ ಅವರಿಗೆ ದ್ವಿತೀಯ ಸ್ಥಾನ. ಸುರೇಶ್ ರೈನಾ ಚೆನ್ನೈ ಪರ ಎಲ್ಲ 156 ಪಂದ್ಯಗಳನ್ನಾಡಿದ್ದು ದಾಖಲೆ. ಶಿಖರ್ ಧವನ್ ಐಪಿಎಲ್‌ನಲ್ಲಿ 350 ಬೌಂಡರಿ ಹೊಡೆದ 4ನೇ ಬ್ಯಾಟ್ಸ್‌ಮನ್ ಎನಿಸಿದರು (353).